×
Ad

ಪ್ರಾಕೃತಿಕ ವಿಕೋಪದ ಪರಿಹಾರ ಧನ ಚೆಕ್ ವಿತರಣೆ

Update: 2021-08-04 19:07 IST

ಉಡುಪಿ, ಆ.4: ಪ್ರಾಕೃತಿಕ ವಿಕೋಪದಡಿ ಹಾನಿಗೊಳಗಾದ ಉಡುಪಿ ತಾಲೂಕಿನ 11 ಕುಟುಂಬಗಳಿಗೆ ಒಟ್ಟು 2.94 ಲಕ್ಷ ರೂ. ಮೊತ್ತದ ಪರಿಹಾರ ಧನದ ಚೆಕ್ ಅನ್ನು ಬುಧವಾರ ಉಡುಪಿ ಶಾಸರ ಕಚೇರಿಯಲ್ಲಿ ವಿತರಿಸಲಾಯಿತು.

ಉಡುಪಿ ತಾಲೂಕಿನ ಹೆರ್ಗ ಗ್ರಾಮದ ಬೂದ ಶೆಟ್ಟಿಗಾರ್, ಸುಮತಿ ನಾಯ್ಕ್, ಕಡೆಕಾರು ಗ್ರಾಮದ ವಸಂತ ಪೂಜಾರಿ, ದಾಮೋದರ ಕೋಟ್ಯಾನ್, ಕೊಡವೂರು ಗ್ರಾಮದ ಸುಜಾತಾ, ಬೇಬಿ ಪೂಜಾರಿ, ಮಾಲತಿ, ವೇದಾವತಿ ಕಾಂಚನ, ಸುರೇಖಾ, ಮಲ್ಲಿಕಾ ದೇವಿ, ನಳಿನಿ ಅವರಿಗೆ ಒಟ್ಟು 2,94,765 ಮೊತ್ತದ ಚೆಕ್  ಶಾಸಕ ಕೆ.ರಘುಪತಿ ಭಟ್ ವಿತರಿಸಿದರು.

ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಶ್ರೀಶ ಕೊಡವೂರು, ಕಡೆಕಾರ್ ಗ್ರಾಮ ಪಂಚಾಯತ್ ಸದಸ್ಯ ರಾಘವೇಂದ್ರ ಕುತ್ಪಾಡಿ ಹಾಗೂ ಉಡುಪಿ ತಹಶೀಲ್ದಾರ ಪ್ರದೀಪ್ ಕುರ್ಡೆಕರ್, ಗ್ರಾಮ ಲೆಕ್ಕಾಧಿಕಾರಿಗಳಾದ ವಾಸುದೇವ್, ಕಾರ್ತಿಕೇಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News