ಹೊಳೆಯಲ್ಲಿ ಅಪರಿಚಿತ ಮೃತದೇಹ ಪತ್ತೆ

Update: 2021-08-04 15:01 GMT

ಉಡುಪಿ, ಆ.4: ಏಣಗುಡ್ಡೆ ಗ್ರಾಮದ ಕಜಕೋಡಿ ಪಾಪಾನಾಶಿನಿ ಹೊಳೆಯ ತೀರದಲ್ಲಿ 60-65ವರ್ಷ ಪ್ರಾಯದ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಜು.29ರಂದು ಪತ್ತೆಯಾಗಿದೆ.

ಈ ವ್ಯಕ್ತಿ ಹೊಳೆಗೆ ಅಕಸ್ಮಿಕವಾಗಿ ಬಿದ್ದು ಅಥವಾ ಜೀವನದಲ್ಲಿ ಜಿಗುಪ್ಸೆ ಗೊಂಡು ಹೊಳೆಗೆ ಹಾರಿ ನೀರಿನಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

5.2ಅಡಿ ಎತ್ತರ, ಗೋದಿ ಮೈಬಣ್ಣ, ಸಾದಾರಣ ಶರೀರ ಹೊಂದಿರುವ ಮೃತ ವ್ಯಕ್ತಿಯ ವಾರೀಸುದಾರರು ಇದ್ದಲ್ಲಿ ಕಾಪು ಪೊಲೀಸ್ ಠಾಣೆ (0820- 2551033/9480805449)ಯನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News