ಭೂಕಂಪ ಮುನ್ನೆಚ್ಚರಿಕೆ ಆ್ಯಪ್ ಆರಂಭಿಸಿದ ಮೊದಲ ರಾಜ್ಯ ಉತ್ತರಾಖಂಡ

Update: 2021-08-04 15:24 GMT

ಡೆಹ್ರಾಡೂನ್,ಆ.4: ಭೂಕಂಪ ಮುನ್ನೆಚ್ಚರಿಕೆ ಆ್ಯಪ್ ಗೆ ಚಾಲನೆ ನೀಡಿದ ಮೊದಲ ರಾಜ್ಯವೆಂಬ ಹೆಗ್ಗಳಿಕೆಗೆ ಉತ್ತರಾಖಂಡ ಪಾತ್ರವಾಗಿದೆ.

ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರಸಿಂಗ್ ಧಾಮಿ ಅವರು ಬುಧವಾರ ‘ಉತ್ತರಾಖಂಡ ಭೂಕಂಪ ಅಲರ್ಟ್’ ಆ್ಯಪ್ ಗೆ ಚಾಲನೆ ನೀಡಿದರು. ಈ ಆ್ಯಪ್ ಅನ್ನು ಆ್ಯಂಡ್ರಾಯ್ಡಾ ಮತ್ತು ಐಒಎಸ್ ಪ್ಲಾಟ್ ಫಾರ್ಮ್ ಗಳಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು. ಉತ್ತರಾಖಂಡ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಮತ್ತು ಐಐಟಿ-ರೂರ್ಕಿ ಈ ಆ್ಯಪ್ ಅನ್ನು ಅಭಿವೃದ್ಧಿಗೊಳಿಸಿವೆ.

ಭೂಕಂಪ ಸಂಭವಿಸುವುದಕ್ಕೆ ಮುನ್ನ ಜನರಿಗೆ ಮುನ್ನೆಚ್ಚರಿಕೆ ಸಂದೇಶಗಳನ್ನು ರವಾನಿಸುವ ಈ ಆ್ಯಪ್ ಭೂಕಂಪ ಸಂದರ್ಭದಲ್ಲಿ ಅವಶೇಷಗಳಡಿ ಸಿಕ್ಕಿ ಹಾಕಿಕೊಂಡ ಜನರನ್ನು ಪತ್ತೆ ಹಚ್ಚಲೂ ನೆರವಾಗುತ್ತದೆ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸುತ್ತದೆ. ಉತ್ತರಾಖಂಡದಲ್ಲಿ ಭೂಕಂಪಗಳು ಸಂಭವಿಸುವ ಸಾಧ್ಯತೆಗಳು ಹೆಚ್ಚಿರುವುದರಿಂದ ಭೂಕಂಪ ಸಂಂಭವಿಸಿದಾಗ ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಈ ಆ್ಯಪ್ ಅಧಿಕಾರಿಗಳಿಗೆ ನೆರವಾಗುತ್ತದೆ ಎಂದು ಆ್ಯಪ್ ಬಿಡುಗಡೆ ಸಂದರ್ಭ ಧಾಮಿ ಹೇಳಿದರು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News