ಸಿಬಿಎಸ್‌ಇ: ಬ್ಯಾರೀಸ್ ಸ್ಕೂಲ್ ಶೇ.100 ಫಲಿತಾಂಶ

Update: 2021-08-04 16:39 GMT
ಸುಹಾ, ಶೈನಾ, ಭಾಗ್ಯವಂತಿ, ಸಾನಿಯಾ, ಅಮನ್
 

ಕುಂದಾಪುರ, ಆ.4: ಕೋಡಿಯ ಬ್ಯಾರೀಸ್ ಸೀಸೈಡ್ ಪಬ್ಲಿಕ್ ಸ್ಕೂಲ್ (ಸಿಬಿಎಸ್‌ಇ) ಎಸೆಸೆಲ್ಸಿ ಪರೀಕ್ಷೆಯಲ್ಲಿ ಸತತವಾಗಿ 4ನೆ ವರ್ಷ ಶೇ.100 ಫಲಿತಾಂಶ ದಾಖಲಿಸಿದೆ.

5 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 6 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣಗೊಂಡಿದ್ದಾರೆ. ವಿದ್ಯಾರ್ಥಿಗಳಾದ ಸುಹಾ ಅನಮೋಲ್ ಶೇ.88, ಶೈನಾ ಫೆರ್ನಾಂಡಿಸ್ ಶೇ.83, ಭಾಗ್ಯವಂತಿ ಪಾಟೀಲ್ ಶೇ. 79.3, ಸಾನಿಯಾ ಶೇ.79, ಎಂ.ಕೆ.ಅಮನ್ ಶೇ.75 ಅಂಕ ಗಳಿಸಿದ್ದಾರೆ.

ಬ್ಯಾರೀಸ್ ಗ್ರೂಪಿನ ಸಂಚಾಲಕ ಸೈಯದ್ ಮಹಮ್ಮದ್ ಬ್ಯಾರಿ, ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಅಬ್ದುಲ್ ರಹ್ಮಾನ್, ನಿರ್ದೇಶಕ ದೋಮ ಚಂದ್ರಶೇಖರ್, ಬ್ಯಾರೀಸ್ ಸೀ ಸೈಡ್ ಪಬ್ಲಿಕ್ ಸ್ಕೂಲ್ ಪ್ರಾಂಶುಪಾಲರು, ಶಿಕ್ಷಕರು ಹಾಗೂ ರಕ್ಷಕ-ಶಿಕ್ಷಕ ಸಂಘದ ಸದಸ್ಯರು ವಿದ್ಯಾರ್ಥಿ ಗಳಿಗೆ ಶುಭ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News