ಆ.5: ಮಂಗಳೂರಿನ ವಿವಿಧೆಡೆ ವಿದ್ಯುತ್ ವ್ಯತ್ಯಯ

Update: 2021-08-04 16:59 GMT

ಮಂಗಳೂರು, ಆ.4: ನಗರದ ವಿವಿಧ ಫೀಟರ್‌ಗಳಲ್ಲಿ ಕಂಬ ಸ್ಥಳಾಂತರ, ದುರಸ್ತಿ, ಇತರ ನಿರ್ವಹಣಾ ಕಾಮಗಾರಿಗಳನ್ನು ಹಮ್ಮಿಕೊಂಡಿರು ವುದರಿಂದ ಆ.5ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

ಕಾಟಿಪಳ್ಳ ಉಪಕೇಂದ್ರ: ಮಂಗಳೂರು ನಗರದ ಕಾಟಿಪಳ್ಳ ವಿದ್ಯುತ್ ಉಪಕೇಂದ್ರದಿಂದ ಹೊರಡುವ 11 ಕೆವಿ ತಡಂಬೈಲ್, ಕಾನ ಮತ್ತು ಸುರತ್ಕಲ್ ಫೀಡರಿನಲ್ಲಿ ಕಾಮಗಾರಿ ಹಮ್ಮಿಕೊಂಡಿದ್ದು, ಸುರತ್ಕಲ್ ನಗರದ ಆಸುಪಾಸು, ಕಾನ, ತಡಂಬೈಲ್, ಮುಕ್ಕ, ಸಸಿಹಿತ್ಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

ಅಳಕೆ ಉಪಕೇಂದ್ರ: ಮಂಗಳೂರು ನಗರದ ಅಳಕೆ ಉಪಕೇಂದ್ರದಿಂದ ಹೊರಡುವ 11 ಕೆವಿ ಪ್ರಗತಿನಗರ, ಡೊಂಗರಕೇರಿ ಹಾಗೂ ಭಗವತಿ ಫೀಡರುಗಳಲ್ಲಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಇದರಿಂದ ಪಾಸ್‌ಪೋರ್ಟ್ ಆಫೀಸ್, ಕೊಡಿಯಾಲ್ ಬೈಲ್, ಕೆನರಾ ಹೈಸ್ಕೂಲ್ ಹಿಂದುಗಡೆ, ಡೊಂಗರಕೇರಿ, ಸಿಟಿ ಸೆಂಟರ್, ಜಿಲ್ಲಾ ನ್ಯಾಯಲಯ, ಕರ್ನಾಟಕ ಬ್ಯಾಂಕ್, ಅಲೋಶಿಯಸ್ ಕಾಲೇಜ್, ಎಸ್‌ಸಿಡಿಸಿಸಿ ಬ್ಯಾಂಕ್, ಜಯಶ್ರೀ ನಸಿರ್‌ಂಗ್ ಹೋಂ, ಪಿವಿಎಸ್ ಕಲಾಕುಂಜ, ಬೆಸೆಂಟ್ ಕಾಲೇಜ್, ಸಿಟಿ ಪಾಯಿಂಟ್, ಶಾರದಾ ವಿದ್ಯಾಲಯ, ಭಗವತಿ ನಗರ, ಕಟ್ಟೆಮಾರ್, ಡೊಂಗರಕೇರಿ, ವೆಂಕಟರಮಣ ದೇವಸ್ಥಾನ, ಕೆನರಾ ಶಾಲೆ, ಗಣಪತಿ ಮಠ, ಹೋಂಡಾ ಶೋರೂಂ, ಸತ್ಯಸಾಯಿ ನಸಿರ್‌ಂಗ್ ಹೋಂ, ಓಶಿಯನ್ ಪರ್ಲ್ ಹೋಟೆಲ್, ಆಯೋಧ್ಯ ಹೋಟೆಲ್, ಸುಧೀಂದ್ರ ಮಾರ್ಕೆಟ್, ಮಾನಸ ಟವರ್, ಪಿವಿಎಸ್ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.

ಕದ್ರಿ ಉಪಕೇಂದ್ರ: ನಗರದ 33/11 ಕೆವಿ ಕದ್ರಿ ಉಪಕೇಂದ್ರದಿಂದ ಹೊರಡುವ 11ಕೆವಿ ಜ್ಯೋತಿ ಫೀಡರ್‌ನಲ್ಲಿ ದುರಸ್ತಿ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದ್ದು, ಬಲ್ಮಠ, ಜ್ಯೋತಿ, ಹಂಪನಕಟ್ಟೆ ರಸ್ತೆ, ಹೋಟೆಲ್ ಮಂಗಳಾ ಕಾಂಪ್ಲೆಕ್ಸ್, ಕುಡುಂಬಿ ಗಾರ್ಡನ್, ಡಾನ್‌ಬಾಸ್ಕೋ ಹಾಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News