ಟೋಕಿಯೊ ಒಲಿಂಪಿಕ್ಸ್: ಬೆಳ್ಳಿಗೆ ತೃಪ್ತಿಪಟ್ಟ ಕುಸ್ತಿಪಟು ರವಿ ಕುಮಾರ್

Update: 2021-08-05 11:19 GMT

ಟೋಕಿಯೊ: ಟೋಕಿಯೊ ಒಲಿಂಪಿಕ್ಸ್ ನಲ್ಲಿ ಗುರುವಾರ ನಡೆದ ಪುರುಷರ ಫ್ರೀಸ್ಟೈಲ್ 57 ಕೆಜಿ ವಿಭಾಗದ ಕುಸ್ತಿ ಫೈನಲ್‌ನಲ್ಲಿ ಭಾರತದ ಯುವ ಕುಸ್ತಿಪಟು  ರವಿಕುಮಾರ್ ದಹಿಯಾ ಅವರು ಎರಡು ಬಾರಿಯ ವಿಶ್ವ ಚಾಂಪಿಯನ್ ರಶ್ಯದ ಝಾವೂರ್ ಉಗೆವ್ ವಿರುದ್ಧ 4-7  ಅಂತರದಿಂದ ಸೋತಿದ್ದಾರೆ. ಈ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.

ರವಿ ಬೆಳ್ಳಿ ಗೆಲ್ಲುವುದರೊಂದಿಗೆ ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತವು 2 ಬೆಳ್ಳಿ ಹಾಗೂ 3 ಕಂಚು ಸಹಿತ ಒಟ್ಟು 5 ಪದಕ ಗೆದ್ದಂತಾಗಿದೆ.

ರವಿ ಕುಮಾರ್ ಒಲಿಂಪಿಕ್ಸ್ ನಲ್ಲಿ ಕುಸ್ತಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಎರಡನೇ ಕುಸ್ತಿಪಟುವಾಗಿದ್ದಾರೆ. ಈ ಹಿಂದೆ 2012ರ ಲಂಡನ್ ಒಲಿಂಪಿಕ್ಸ್ ನಲ್ಲಿ ಸುಶೀಲ್ ಕುಮಾರ್ ಈ ಸಾಧನೆ ಮಾಡಿದ್ದರು.

ದಹಿಯಾ ಅವರು ಕೆಡಿ ಜಾಧವ್, ಸುಶೀಲ್ ಕುಮಾರ್, ಯೋಗೇಶ್ವರ ದತ್ತ  ಹಾಗೂ ಸಾಕ್ಷಿ ಮಲಿಕ್ ಬಳಿಕ ಒಲಿಂಪಿಕ್ಸ್ ಪದಕ ಗೆದ್ದಿರುವ ಭಾರತದ 5ನೇ ಕುಸ್ತಿಪಟು ಆಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News