ಆನ್‌ಲೆನ್‌ಪತ್ರಲೇಖನ, ಚಿತ್ರಕಲಾ ಸ್ಪರ್ಧೆ : ವಿಜೇತರಿಗೆ ಬಹುಮಾನ ವಿತರಣೆ
ಉಡುಪಿ, ಆ.5: ಮಕ್ಕಳಲ್ಲಿ ಒತ್ತಡ ಮತ್ತು ಏಕತಾನತೆಯನ್ನು ಕಡಿಮೆ ಗೊಳಿಸುವ ನಿಟ್ಟಿನಲ್ಲಿ ಅಂಚೆ ಇಲಾಖೆ ಏರ್ಪಡಿಸಿದ್ದ ಆನ್‌ಲೈನ್ ಪತ್ರ ಲೇಖನ ಹಾಗೂ ಚಿತ್ರಕಲಾ ಸ್ಪರ್ಧಾ ವಿಜೇತರಿಗಾಗಿ ಬಹುಮಾನ ವಿತರಣಾ ಸಮಾರಂಭ ಉಡುಪಿ ಅಂಚೆ ಅಧೀಕ್ಷಕರ ಕಾರ್ಯಾಲಯದಲ್ಲಿ ನಡೆಯಿತು.
ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಉಡುಪಿ ಅಂಚೆ ಅಧೀಕ್ಷಕ ನವೀನ್‌ಚಂದರ್ ಬಹುಮಾನ ವಿತರಿಸಿದರು. ಪತ್ರ ಲೇಖನ ಸ್ಪರ್ದೆಯಲ್ಲಿ ಇಂದ್ರಾಳಿ ಆಂಗ್ಲ ಮಾಧ್ಯಮ ಶಾಲೆಯ ಮಾನ್ಯ (ಪ್ರಥಮ), ವಳಕಾಡು ಶಾಲೆಯ ಹರ್ಷಿತ್ ಆಚಾರ್ಯ (ದ್ವಿತೀಯ), ಗಗನ್‌ರಾಜ್ (ತೃತೀಯ) ಬಹುಮಾನ ಪಡೆದರೆ, ಚಿತ್ರಕಲಾ ಸ್ಪರ್ಧೆಯಲ್ಲಿ ವಳಕಾಡು ಸಂಯುಕ್ತ ಶಾಲೆಯ ಕೇದಾರ ನಾಯಕ್ (ಪ್ರಥಮ), ಭಾರ್ಗವಿ ಬಿ ಎಂ (ದ್ವಿತೀಯ), ಇಂದ್ರಾಳಿ ಶಾಲೆಯ ಪಂಚಮಿ ಜಿ. ಎಸ್ (ತೃತೀಯ) ಸ್ಥಾನ ಗಳಿಸಿದರು.
ಸಹಾಯಕ ಅಂಚೆ ಅಧೀಕ್ಷಕ ಜಯರಾಮ ಶೆಟ್ಟಿ ಅಂಚೆಚೀಟಿ ಸಂಗ್ರಹ- ಫಿಲಾಟೆಲಿಯ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಿದರು. ಅಂಚೆ ಮಾರ್ಕೆಟಿಂಗ್ ವಿಭಾಗದ ಪೂರ್ಣಿಮಾ ಜನಾರ್ಧನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಹಾಯಕ ಅಧೀಕ್ಷಕ ಕೃಷ್ಣರಾಜ ವಿಠ್ಠಲ ಭಟ್ ವಂದಿಸಿದರು