×
Ad

ಐಟಿ ಕಾಯಿದೆ ತಿದ್ದುಪಡಿ ಮಸೂದೆ: ಬಿಜೆಪಿ-ಸ್ವದೇಶಿ ಜಾಗರಣ್ ಮಂಚ್‍ ನಾಯಕರ ನಡುವೆ ಟ್ವಿಟ್ಟರ್ ಸಮರ

Update: 2021-08-06 18:19 IST
Photo: Twitter

ಹೊಸದಿಲ್ಲಿ: ಆದಾಯ ತೆರಿಗೆ ಕಾಯಿದೆ 1961ಗೆ  ತಿದ್ದುಪಡಿ ತರುವ ಉದ್ದೇಶದಿಂದ  ಕೇಂದ್ರ ಮಂಡಿಸಿರುವ ಆದಾಯ ತೆರಿಗೆ ಕಾನೂನುಗಳ (ತಿದ್ದುಪಡಿ) ಮಸೂದೆ 2021 ಆರೆಸ್ಸೆಸ್ ಸಹ ಸಂಸ್ಥೆಯಾಗಿರುವ ಸ್ವದೇಶಿ ಜಾಗರಣ ಮಂಚ್‍ನ ರಾಷ್ಟ್ರೀಯ ಸಹ ಸಂಚಾಲಕ ಅಶ್ವನಿ ಮಹಾಜನ್ ಹಾಗೂ ಬಿಜೆಪಿಯ ವಿದೇಶ ವ್ಯವಹಾರ ವಿಭಾಗದ ಉಸ್ತುವಾರಿ ವಿಜಯ್ ಚೌಥೈವಾಲೆ ಅವರ ನಡುವೆ ಟ್ವಿಟ್ಟರ್ ಸಮರಕ್ಕೆ ಕಾರಣವಾಗಿದೆ.

ಅಶ್ವನಿ ಮಹಾಜನ್ ಟ್ವೀಟ್ ಮಾಡಿ "ಅಂತರಾಷ್ಟ್ರೀಯ ಮಟ್ಟದ ಒತ್ತಡದಿಂದ ಸರಕಾರಕ್ಕೆ ಬೇರೆ ಆಯ್ಕೆಯಿರಲಿಲ್ಲ ನಿಜ ಆದರೆ ಅದರ ಶೀರ್ಷಿಕೆ  ಕಳ್ಳರಿಗೆ ಪರಿಹಾರ ಎಂದಾಗಬೇಕಿತ್ತು-  ಸರಕಾರ ಮತ್ತು ಸಾರ್ವಜನಿಕರಿಗೆ ಸಾವಿರಾರು ಕೋಟಿ ರೂಪಾಯಿಗಳ ನಷ್ಟ. ವಿದೇಶಿ ಹೂಡಿಕೆಯ ಅನಾನುಕೂಲದ ಒಂದು ದೊಡ್ಡ ಉದಾಹರಣೆ" ಎಂದು ಬರೆದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ವಿಜಯ್ ಚೌಥೈವಾಲೆ, "ನೀವು ಎಫ್‍ಡಿಐಗೆ ಸಂಪೂರ್ಣ ನಿಷೇಧ ಆಗ್ರಹಿಸುತ್ತಿದ್ದೀರಾ?" ಎಂದು ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತ್ಯುತ್ತರಿಸಿ ಟ್ವೀಟ್ ಮಾಡಿದ ಮಹಾಜನ್, "ಒಂದು ನೀತಿಯ ಲಾಭ, ನಷ್ಟಗಳ ಕುರಿತು ಮಾತನಾಡುವುದು ಅಪರಾಧವೇ?" ಎಂದು ಕೇಳಿದ್ದಾರೆ.

ಇದಕ್ಕೂ ಬಿಜೆಪಿ ನಾಯಕ ಉತ್ತರಿಸಿ "ಕ್ರಿಮಿನಲ್ ಅಲ್ಲದೇ ಇರುವ ಎಲ್ಲವೂ ರಾಷ್ಟ್ರೀಯ ಹಿತಾಸಕ್ತಿಯಲ್ಲಿಲ್ಲದೇ ಇರಬಹುದು, ಆದರೆ ಈ ಅಂಶವನ್ನು ಒಪ್ಪಿಕೊಳ್ಳಲು ನೀವು ಸಿದ್ಧರಿಲ್ಲ" ಎಂದರು.

ಇದಕ್ಕೆ ಪ್ರತಿಕ್ರಿಯೆ ರೂಪದಲ್ಲಿ ಮಹಾಜನ್ ಅವರು ಈ ಕುರಿತು ಚರ್ಚೆಗೆ  ಬಿಜೆಪಿ ನಾಯಕನನ್ನು ಆಹ್ವಾನಿಸಿ "ನಿಮ್ಮ ಮಹಾನ್ ನಂಬಿಕೆಗಳ ಬಗ್ಗೆ ಚರ್ಚೆಯನ್ನೇಕೆ ನೀವು ನಡೆಸಬಾರದು" ಎಂದು ಕೇಳಿದ್ದಾರೆ. ಇದಕ್ಕೆ ವಿಜಯ್ ಇನ್ನಷ್ಟೇ ಉತ್ತರಿಸಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News