×
Ad

ಗಣೇಶ ಚತುರ್ಥಿ ಪ್ರಯುಕ್ತ ಮುಂಬೈ ಸೆಂಟ್ರಲ್-ಸುರತ್ಕಲ್ ನಡುವೆ ಸಾಪ್ತಾಹಿಕ ವಿಶೇಷ ರೈಲು

Update: 2021-08-06 19:23 IST

ಉಡುಪಿ, ಆ.6: ಮುಂಬರುವ ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ಕೊಂಕಣ ರೈಲ್ವೆಯು ಕೇಂದ್ರ ರೈಲ್ವೆ ಹಾಗೂ ಪಶ್ಚಿಮ ರೈಲ್ವೆಯ ಸಹಯೋಗ ದೊಂದಿಗೆ ಮುಂಬೈ ಸೆಂಟ್ರಲ್ ಹಾಗೂ ಸುರತ್ಕಲ್ ನಡುವೆ ಸಾಪ್ತಾಹಿಕ ಗಣಪತಿ ವಿಶೇಷ ರೈಲನ್ನು ಓಡಿಸಲಿದೆ.

ರೈಲು ನಂ.09183 ಮುಂಬಯಿ ಸೆಂಟ್ರಲ್- ಸುರತ್ಕಲ್ ವಿಶೇಷ ರೈಲು, ವಿಶೇಷ ಟಿಕೇಟ್ ದರ ಹಾಗೂ ಸಂಪೂರ್ಣ ರಿಸರ್ವೇಶನ್‌ನೊಂದಿಗೆ ಸೆ.8 ಮತ್ತು 15ರಂದು ರಾತ್ರಿ 11:55ಕ್ಕೆ ಮುಂಬೈ ಸೆಂಟ್ರಲ್‌ನಿಂದ ತೆರಳಲಿದ್ದು, ಮರುದಿನ ಸಂಜೆ 8 ಗಂಟೆಗೆ ಸುರತ್ಕಲ್ ತಲುಪಲಿದೆ.

ಅದೇ ರೀತಿ ರೈಲು ನಂ.09184 ಸುರತ್ಕಲ್- ಮುಂಬೈ ಸೆಂಟ್ರಲ್ ರೈಲು ಸಹ ವಿಶೇಷ ಟಿಕೇಟ್ ದರ ಹಾಗೂ ಸಂಪೂರ್ಣ ರಿಸರ್ವೇಶನ್‌ನೊಂದಿಗೆ ಸೆ.9 ಮತ್ತು 16ರಂದು ರಾತ್ರಿ 9:15ಕ್ಕೆ ಸುರತ್ಕಲ್‌ನಿಂದ ಪ್ರಯಾಣ ಬೆಳೆಸಲಿದ್ದು, ಮರುದಿನ ರಾತ್ರಿ 8:55ಕ್ಕೆ ಮುಂಬೈ ಸೆಂಟ್ರಲ್ ತಲುಪಲಿದೆ.

ಈ ರೈಲಿಗೆ ಬೋರಿವಿಲಿ, ವಾಸೈರೋಡ್, ಪನ್ವೇಲ್, ರೋಹಾ, ಖೇಡ್, ಚಿಪ್ಳುಣ್, ಸಂಗಮೇಶ್ವರ ರೋಡ್, ರತ್ನಗಿರಿ, ರಾಜಾಪುರ್ ರೋಡ್, ಕನ್‌ಕಾವ್ಲಿ, ಸಿಂಧುದುರ್ಗ, ಕುಡಾಲ್, ಸಾವಂತವಾಡಿ ರೋಡ್, ತೀವಿಮ್, ಕರ್ಮಾಲಿ, ಮಡಗಾಂವ್ ಜಂಕ್ಷನ್, ಕಾರವಾರ, ಕುಮಟ, ಭಟ್ಕಳ, ಕುಂದಾಪುರ, ಉಡುಪಿ ಹಾಗೂ ಮುಲ್ಕಿ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ.

ಈ ರೈಲು ಒಟ್ಟು 15 ಕೋಚ್‌ಗಳನ್ನು ಹೊಂದಿರುತ್ತದೆ. ಇವುಗಳಲ್ಲಿ 2 ಟೂಟಯರ್ ಎಸಿ ಕೋಚ್, ಎಂಟು ತ್ರಿಟಯರ್ ಎಸಿ ಕೋಚ್, ಎರಡು ಸ್ಲೀಪರ್ ಕೋಚ್, ಒಂದು ಪ್ಯಾಂಟ್ರಿಕಾರ್ ಹಾಗೂ ಎರಡು ಜನರೇಟರ್ ಕಾರ್‌ಗಳನ್ನು ಹೊಂದಿರುತ್ತದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News