×
Ad

ಪ್ರೊ.ಸ್ಯಾಮುಯೆಲ್‌ಗೆ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿ

Update: 2021-08-06 19:48 IST

ಬ್ರಹ್ಮಾವರ, ಆ.6: ಹೊಸದಿಲ್ಲಿಯ ಅಖಿಲ ಭಾರತ ಅಸೋಸಿಯೇಷನ್ ಫಾರ್ ಕ್ರಿಶ್ಚಿಯನ್ ಹೈಯರ್ ಎಜುಕೇಶನ್ ಮತ್ತು ದೇಶದ ಎಲ್ಲ ಕ್ರಿಶ್ಚಿಯನ್ ಉನ್ನತ ಶಿಕ್ಷಣ ಸಂಸ್ಥೆಗಳ ಸದಸ್ಯರು ಉಡುಪಿ ಜಿಲ್ಲೆಯ ಬ್ರಹ್ಮಾವರದ ಕ್ರಾಸ್‌ಲ್ಯಾಂಡ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಸ್ಯಾಮುಯೆಲ್ ಕೆ. ಸ್ಯಾಮುಯೆಲ್ ಅವರನ್ನು 2018-19ನೇ ಸಾಲಿನ ದೇಶದ ಅತ್ಯುತ್ತಮ ಪ್ರಾಂಶುಪಾಲರ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ಈ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿಯನ್ನು ಎಐಎಸಿಎಚ್‌ಇ ಶೈಕ್ಷಣಿಕ ನಾಯಕತ್ವದ ಗುರುತಿಸುವಿಕೆ, ಶೈಕ್ಷಣಿಕ ಉತ್ಕೃಷ್ಟತೆ, ಶೈಕ್ಷಣಿಕ ಆವಿಷ್ಕಾರಗಳ ಪರಿಚಯದಲ್ಲಿ ಭಾಗವಹಿಸುವಿಕೆ, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯ ಕಾಳಜಿ ಮತ್ತು ವೃತ್ತಿಪರ ನೈತಿಕತೆಯ ಉನ್ನತ ಗುಣಮಟ್ಟವನ್ನು ಗಮನಿಸಿ ನೀಡಲಾಗುತ್ತದೆ. ಎಐಎಸಿಎಚ್‌ಇಯ ವಾರ್ಷಿಕ ಸಾಮಾನ್ಯ ಸಭೆ ಮತ್ತು ತ್ರೈವಾರ್ಷಿಕ ಸಮ್ಮೇಳನ ದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News