×
Ad

ಮುಖ್ಯಮಂತ್ರಿ ಆರೋಗ್ಯ ಕಾರ್ಡ್ ನವೀಕರಣ ಅವಧಿ ವಿಸ್ತರಣೆ

Update: 2021-08-06 20:17 IST

ಉಡುಪಿ, ಆ.6: ಪ್ರಸ್ತುತ ಮುಖ್ಯಮಂತ್ರಿ ಆರೋಗ್ಯ ವಿಮಾ ಕಾರ್ಡನ್ನು ನವೀಕರಿಸಲಾಗುತ್ತಿದ್ದು, ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಪ.ಜಾತಿ/ಪ.ಪಂಗಡದ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರು, ತಮ್ಮ ಕುಟುಂಬದಲ್ಲಿನ ಯಾವುದಾದರೂ ಒಬ್ಬ ಸದಸ್ಯರ ಆಧಾರ್ ಕಾರ್ಡ್ ಮತ್ತು ರೇಷನ್ ಕಾರ್ಡ್‌ನ ಪ್ರತಿಯೊಂದಿಗೆ ಕಚೇರಿಗೆ ಹಾಜರಾಗಿ ಕಾರ್ಡ್‌ನ್ನು ನವೀಕರಿಸಿಕೊಳ್ಳಲು ಆ.10 ಕೊನೆಯ ದಿನವಾಗಿದೆ. ನಂತರ ಬರುವ ಯಾವುದೇ ಅರ್ಜಿಗಳನ್ನು ನವೀಕರಿಸಲು ಸಾಧ್ಯವಾಗುವುದಿಲ್ಲ ಎಂದು ಉಡುಪಿ ನಗರಸಭಾ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News