×
Ad

ಅಮ್ಮುಂಜೆ: ಸಾರ್ವಜನಿಕ ರಕ್ತದಾನ ಶಿಬಿರ

Update: 2021-08-09 23:11 IST

ಅಮ್ಮುಂಜೆ, ಆ.9: ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ಸಂಸ್ಥೆಯ ಆಶ್ರಯದಲ್ಲಿ ಹಾಗೂ ದೇರಳಕಟ್ಟೆ ಯೆನೆಪೋಯ ವೈದ್ಯಕೀಯ ಆಸ್ಪತ್ರೆಯ ಸಹಭಾಗಿತ್ವದಲ್ಲಿ  ಸೌಹಾರ್ದ ಫ್ರೆಂಡ್ಸ್ ಅಮ್ಮುಂಜೆ ಆಯೋಜಿತ ಸಾರ್ವಜನಿಕ ರಕ್ತದಾನ ಶಿಬಿರವು ಅಮ್ಮುಂಜೆ ಬೀರದಂಗಡಿಯ ಮುನವ್ವರ್ ಇಸ್ಲಾಂ ಮದ್ರಸದಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬೂಬಕರ್ ಸಿದ್ದೀಕ್ ಬಾಕಿಮಾರು ವಹಿಸಿದ್ದರು. ಇದೇ ವೇಳೆ ವೈದ್ಯ ಹಾಗೂ ಸಮಾಜ ಸೇವಕ ಡಾ. ಇ.ಕೆ.ಎ.ಸಿದ್ದೀಕ್, ಕೊರೋನ ವಾರಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಕೈಕಂಬ ಮರ್ಕಝ್ ನಗರದ ಅಬ್ದುಲ್ ಮಜೀದ್ ಹಾಗು ಹಕೀಂ ಕಲಾಯಿ ಅವರನ್ನು ಸನ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಮುಹಿಯುದ್ದೀನ್ ಜುಮಾ ಮಸೀದಿ ಅಧ್ಯಕ್ಷ ಡಿ. ಅಬ್ದುಲ್ ಖಾದರ್, ಉಪಾಧ್ಯಕ್ಷ ಮಹಮ್ಮದ್ ಮೇಗಿನ ಮನೆ, ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ವಾಮನ ಆಚಾರ್ಯ, ಅಮ್ಮುಂಜೆ ಜಿ.ಸಿ.ಸಿ. ಅಧ್ಯಕ್ಷ ಜಿ.ಎಸ್.ಸಿರಾಜ್, ಸಮಾಜ ಸೇವಕ ಅಬ್ದುಲ್ ಹಕೀಮ್ ತಾಳಿಪ್ಪಾಡಿ, ಕರಿಯಂಗಳ ಗ್ರಾಪಂ ಸದಸ್ಯ ಶಮೀಮ್ ಗಾಣೆಮಾರು, ಯುವ ಉದ್ಯಮಿಗಳಾದ ಸತ್ಯಪ್ರಸಾದ್, ರಿಯಾಝ್ ಎಂ.ಜಿ. ಮೂಡಾಯಿಕೋಡಿ, ರಿಯಾಝ್ ಕಣಿಯೂರು, ಅಶ್ರಫ್ ಅಮ್ಮುಂಜೆ, ಬ್ಲಡ್ ಹೆಲ್ಪ್‌ಲೈನ್ ಕರ್ನಾಟಕ ನಿರ್ವಾಹಕ ಇಫಾಝ್ ಬನ್ನೂರು ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News