×
Ad

ಸುಬ್ರಹ್ಮಣ್ಯ: ಎಸೆಸೆಲ್ಸಿಯಲ್ಲಿ ಅನನ್ಯಾ, ವೆನಿಸ್ಸಾ ಶೆರಿನಾಗೆ 625 ಅಂಕ

Update: 2021-08-09 23:22 IST

ಸುಬ್ರಹ್ಮಣ್ಯ: ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ವಿದ್ಯಾರ್ಥಿಗಳಾದ  ಅನನ್ಯಾ ಎಂ.ಡಿ ಮತ್ತು ವೆನಿಸ್ಸಾ ಶರಿನಾ ಡಿಸೋಜಾ ಎಸೆಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದು ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಈ ಮೂಲಕ ಗ್ರಾಮೀಣ ಪ್ರದೇಶ ಕುಕ್ಕೆ ಸುಬ್ರಹ್ಮಣ್ಯದ ವಿದ್ಯಾಸಂಸ್ಥೆಯ ಇಬ್ಬರು ವಿದ್ಯಾರ್ಥಿಗಳು ಈ ಸಾಧನೆ ಮೆರೆಯುವ ಮೂಲಕ ಹೆಮ್ಮೆ ಎನಿಸಿದ್ದಾರೆ.

ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾರ್ಥಿನಿ ಅನನ್ಯಾ ಗುತ್ತಿಗಾರಿನ ವಳಲಂಬೆಯ ಮಣಿಯಾನಮನೆ ದುರ್ಗೇಶ್ ಹಾಗೂ ವೇದಾವತಿ ದಂಪತಿಗಳ ಪುತ್ರಿ.

ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾರ್ಥಿನಿ ವೆನಿಸ್ಸಾ ಶರಿನಾ ಡಿಸೋಜಾ ಅವರು ಸುಬ್ರಹ್ಮಣ್ಯದ ಉದ್ಯಮಿ ವೆಲೇರಿಯನ್ ಡಿಸೋಜಾ ಮತ್ತು ತೆರೆಸಾ ಡಿಸೋಜಾ ದಂಪತಿಗಳ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News