ದ.ಕ. ಯುವ ಕಾಂಗ್ರೆಸ್ ವತಿಯಿಂದ ವಾಕರ್, ಹಣ್ಣು ಹಂಪಲು ವಿತರಣೆ
ಮಂಗಳೂರು, ಆ.9: ಕ್ವಿಟ್ ಇಂಡಿಯಾ ಚಳುವಳಿ ಸ್ಮಾರಣಾರ್ಥ ಹಾಗೂ ಯುವ ಕಾಂಗ್ರೆಸ್ ಸಂಸ್ಥಾಪನ ದಿವಸ್ ಪ್ರಯುಕ್ತ ಯುವ ಕಾಂಗ್ರೆಸ್ ವತಿಯಿಂದ ವೆನ್ಲಾಕ್ ಆಸ್ಪತ್ರೆಯಲ್ಲಿ ವಾಕರ್ ಮತ್ತು ಹಣ್ಣುಹಂಪಲು ವಿತರಣೆ ಇಂದು ನಡೆಯಿತು.
ಈ ಸಂದರ್ಭದಲ್ಲಿ ಎಐಸಿಸಿ ಕಾರ್ಯದರ್ಶಿ ಪಿವಿ ಮೋಹನ್ ಮಾತನಾಡಿ, ಸ್ವಾತಂತ್ರ ಹೋರಾಟದಲ್ಲಿ ಬಲಿದಾನ ನೀಡಿರುವ ಮಹನೀಯರಿಗೆ ಶ್ರದ್ದಾಂಜಲಿ ಅರ್ಪಿಸುವ ಮತ್ತು ಯೂವ ಕಾಂಗ್ರೆಸ್ ಸ್ಥಾಪನ ದಿನದಂದು ಬಡ ರೋಗಿಗಳಿಗೆ ನೀಡುತ್ತಿರುವಂತಹ ಸೇವೆ ಅವಿಸ್ಮರಣೀಯ. ಇಂತಹ ಸೇವೆ ನಿರಂತರವಾಗಿ ಯುವ ಕಾಂಗ್ರೆಸ್ ನಿಂದ ಹರಿದು ಬರಲಿ ಎಂದರು.
ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಮಾತನಾಡಿ, ಇಂದಿನ ಸ್ಮರಣಿಯ ದಿನದಂದು ಯುವ ಕಾಂಗ್ರೆಸ್ ವತಿಯಿಂದ ಸವಾಜ ಮುಖಿ ಕೆಲಸಗಳು ನಡೆಯುತ್ತಿದೆ. ಕೋವಿಡ್ ಸಂಕಷ್ಟ ಕಾಲದಲ್ಲಿಯೂ ಕೂಡಾ ಯುವ ಕಾಂಗ್ರೆಸ್ ಅನೇಕ ಕಡೆಗಳಲ್ಲಿ ನಿರ್ಗತಿಕರಿಗೆ, ನೊಂದವರಿಗೆ ಬಹಳಷ್ಟು ಸೇವೆಯನ್ನು ಮಾಡಿದೆ ಎಂದರು. ಯುವ ಕಾಂಗ್ರೆಸ್ ಉಪಾಧ್ಯಕ್ಷ ಸವಾನ್ ಎಸ್. ಕೆ. ಮತ್ತು ರಮಾನಂದ ಪೂಜಾರಿ ಯವರು ವಿತರಣೆಯ ವ್ಯವಸ್ಥೆಯನ್ನು ಮಾಡಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಟಿಕೆ ಸುಧೀರ್, ಸೌತ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್, ಪ್ರವೀತಾ ಕರ್ಕೇರ, ಮಲ್ಕಮ್ ಡಿಸೋಜಾ, ಇಮ್ರಾನ್ ಮೊದಲಾದವರು ಉಪಸ್ಥಿತರಿದ್ದರು.