ಈಶ್ವರಪ್ಪರ ಮೆದುಳಿನ ಸಮತೋಲನ ತಪ್ಪಿದೆ: ವಿನಯ ಕುಮಾರ್ ಸೊರಕೆ ಆಕ್ರೋಶ
Update: 2021-08-10 20:07 IST
ಉಡುಪಿ, ಆ.10: ಬೆಂಗಳೂರಿನ ವಿಧಾನಸೌಧ ಬಳಿ ಕಾಂಗ್ರೆಸ್‌ನವರ ವಿರುದ್ಧ ಅವಾಚ್ಯವಾಗಿ ಹೇಳಿಕೆ ನೀಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಒಬ್ಬ ಅನಾಗರಿಕ ವ್ಯಕ್ತಿ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಕಿಡಿಕಾರಿದ್ದಾರೆ.
ಸಚಿವ ಈಶ್ವರಪ್ಪರ ಮೆದುಳಿನ ಸಮತೋಲನ ತಪ್ಪಿದೆ. ಬಿಜೆಪಿ ಅವರ ಮೆದುಳಿನ ಪರೀಕ್ಷೆ ಮಾಡಿಸಬೇಕು. ತಲೆಯ ಪರೀಕ್ಷೆ ನಡೆಸದಿದ್ದರೆ ಮುಂದೆ ರಾಜ್ಯಕ್ಕೆ ಆಗಬಹುದಾದ ಅನಾಹುತ ಎದುರಿಸಬೇಕಾದೀತು. ಕೂಡಲೇ ಈಶ್ವರಪ್ಪ ಅವರನ್ನು ಚಿಕಿತ್ಸೆಗೆ ಒಳಪಡಿಸಬೇಕು. ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ನವರು ಈಶ್ವರಪ್ಪನವರ ಮೆದುಳಿಗೂ ನಾಲಿಗೆಗೂ ಸಂಬಂಧ ಇಲ್ಲ ಎಂದು ಹೇಳಿದ್ದರು. ಆಗಾಗ ಇದು ಸಾಬೀತಾಗುತ್ತಿದೆ. ಶೀಘ್ರ ಈಶ್ವರಪ್ಪರಿಗೆ ಚಿಕಿತ್ಸೆ ಕೊಡಿಸಿ ಎಂದು ವಿನಯ್ ಕುಮಾರ ಸೊರಕೆ ಸಲಹೆ ನೀಡಿದರು.