ಆ.12ರಂದು ‘ದಲಿತರ ಮಗಳೂ ದೇಶದ ಮಗಳು’ ಬೃಹತ್ ಪ್ರತಿಭಟನೆ, ಜಾಥ
Update: 2021-08-10 20:58 IST
ಉಡುಪಿ, ಆ.10: ದೆಹಲಿಯ ದಲಿತ ಮಗಳ ಮೇಲಿನ ಅತ್ಯಾಚಾರ ಹಾಗೂ ಕೊಲೆಯನ್ನು ಖಂಡಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಮತ್ತು ಸಹಬಾಳ್ವೆ ವತಿಯಿಂದ ‘ದಲಿತರ ಮಗಳೂ ದೇಶದ ಮಗಳು’ ಬೃಹತ್ ಪ್ರತಿಭಟನೆ ಮತ್ತು ಜಾಥವನ್ನು ಆ.12ರಂದು ಸಂಜೆ 5ಗಂಟೆಗೆ ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಅಜ್ಜರಕಾಡು ಹುತಾತ್ಮರ ಸ್ಮಾರಕದಿಂದ ನಗರದ ಬೋರ್ಡ್ ಹೈಸ್ಕೂಲ್‌ವರೆಗೆ ಜಾಥ ನಡೆಸಲಾಗುವುದು ಎಂದು ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.