ಬಾವಿಗೆ ಬಿದ್ದು ಯುವಕ ಮೃತ್ಯು
Update: 2021-08-10 21:21 IST
ಬ್ರಹ್ಮಾವರ, ಆ.10: ವ್ಯಕ್ತಿಯೊಬ್ಬರು ಅಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಆ.9ರಂದು ಬೆಳಗ್ಗೆ ಹಾರಾಡಿ ಗ್ರಾಮದ ಹೊನ್ನಾಳ ಕುಕ್ಕುಡೆ ಎಂಬಲ್ಲಿ ನಡೆದಿದೆ.
ಮೃತರನ್ನು ಕುಕ್ಕುಡೆ ನಿವಾಸಿ ಪಾರ್ವತಿ ಎಂಬವರ ಮಗ ಹರೀಶ್ ಜಿ.(33) ಎಂದು ಗುರುತಿಸಲಾಗಿದೆ. ಸಿಎ ಪ್ರ್ಯಾಕ್ಟೀಸ್ ಮಾಡುತ್ತಿರುವ ಇವರು, ಎಂದಿನಂತೆ ಗದ್ದೆ ಕಡೆ ವಾಕಿಂಗ್‌ಗೆ ಹೋಗಿದ್ದರು. ಈ ವೇಳೆ ಮನೆ ಸಮೀಪದ ಆವರಣವಿಲ್ಲದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ದೂರಲಾಗಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.