ವಿದ್ಯುತ್ ಆಘಾತದಿಂದ ಮೃತ್ಯು
Update: 2021-08-10 21:22 IST
ಹೆಬ್ರಿ, ಆ.10: ಕಬ್ಬಿಣದ ಏಣಿಯಲ್ಲಿ ವಿದ್ಯುತ್ ಹರಿದು ಆಘಾತಕ್ಕೆ ಒಳಗಾದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಆ.10ರಂದು ಬೆಳಗ್ಗೆ ಕಬ್ಬಿನಾಲೆ ಗ್ರಾಮದ ಮಜ್ಜಿಗುಡ್ಡೆ ಎಂಬಲ್ಲಿ ನಡೆದಿದೆ.
ಮೃತರನ್ನು ಕಬ್ಬಿನಾಲೆ ಗ್ರಾಮದ ಮಜ್ಜಿಗುಡ್ಡೆಯ ಲಕ್ಷ್ಮೀಶ್ ಹೆಬ್ಬಾರ್(54) ಎಂದು ಗುರುತಿಸಲಾಗಿದೆ. ಇವರು ತಮ್ಮನ ತೋಟದಲ್ಲಿದ್ದ ಅಡಿಕೆ ಮರ ಹತ್ತುವ ಕಬ್ಬಿಣದ ಏಣಿಯನ್ನು ಕೊಂಡು ಹೋಗಲು ಕೈಯಿಂದ ಮೇಲಕ್ಕೆತ್ತಿದಾಗ ಏಣಿಯ ತುದಿಯು ಎತ್ತರದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗೆ ಅಕಸ್ಮಿಕವಾಗಿ ತಾಗಿತ್ತೆನ್ನಲಾಗಿದೆ. ಅದರ ಪರಿಣಾಮ ಕಬ್ಬಿಣದ ಏಣಿಯಲ್ಲಿ ವಿದ್ಯುತ್ ಹರಿದು ಲಕ್ಷ್ಮೀಶ್ ಹೆಬ್ಬಾರ್ ಆಘಾತಕ್ಕೆ ಒಳಗಾದರು. ಇದರಿಂದ ಗಂಭೀರವಾಗಿ ಅಸ್ವಸ್ಥಗೊಂಡ ಅವರು ಆಸ್ಪತ್ರೆಗೆ ಕರೆದು ಕೊಂಡು ಹೋಗುವ ದಾರಿ ಮದ್ಯೆ ಮೃತಪಟ್ಟರು.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.