×
Ad

ಆ.13: ಪೊಲೀಸ್ ನೇಮಕಾತಿ ತರಬೇತಿ ಕಾರ್ಯಾಗಾರ

Update: 2021-08-10 22:18 IST

ಮಂಗಳೂರು, ಆ.10: ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಪಿಎಸ್‌ಐ ಹಾಗೂ ಪಿಸಿ ನೇಮಕಾತಿಗೆ ಸಹಕಾರಿಯಾಗುವಂತೆ ಆ.13ರಂದು ಸಂಜೆ 5ಕ್ಕೆ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಅರ್ಹತಾ ಪರೀಕ್ಷೆ ನಡೆಯಲಿದೆ. ಸುಮಾರು 685 ಮಂದಿ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದು, ನಗರದ ಹಂಪನಕಟ್ಟೆ ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನಲ್ಲಿ ಅರ್ಹತಾ ಪರೀಕ್ಷೆ ನಡೆಯಲಿದೆ.

ತರಬೇತಿ ಕಾರ್ಯಾಗಾರಕ್ಕೆ ಭಾಗವಹಿಸಲು ಈಗಾಗಲೇ ನೋಂದಣಿ ಮಾಡಿರುವ ಅಭ್ಯರ್ಥಿಗಳು ಆ ದಿನದಂದು ಒಂದು ಗಂಟೆ ಮುಂಚಿತವಾಗಿ ಹಾಜರಿರಬೇಕು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News