ದುಬೈ: ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ರಕ್ತದಾನ ಶಿಬಿರ

Update: 2021-08-10 17:35 GMT

ದುಬೈ: ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ವತಿಯಿಂದ ರಕ್ತದಾನ ಶಿಬಿರವು ಲತೀಫಾ ಆಸ್ಪತ್ರೆ ರಕ್ತನಿಧಿ ಸಹಕಾರದಲ್ಲಿ ದುಬೈಯಲ್ಲಿ ರವಿವಾರ ನಡೆಯಿತು.

ರಕ್ತದಾನ ಶಿಬಿರವನ್ನು ಸಿನಾನ್ ಅರ್ಫಾ, ಬ್ಲಡ್ ಡೋನರ್ಸ್ ಮಂಗಳೂರು ಇದರ ಮಹಿಳಾ ವಿಭಾಗದ ಕಾರ್ಯನಿರ್ವಾಹಕಿಯಾದ ಅಸ್ಮಾ ಇಸ್ಮಾಯಿಲ್ ಹಾಗೂ ಸಯ್ಯದ್ ಸದ್ದಾಮ್ ಉಳ್ಳಾಲ್ ಉದ್ಘಾಟಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಅಬ್ದುಲ್ ಲತೀಫ್ ಮುಕ್ಕ, ಇಲ್ಯಾಸ್ ಕಂದಕ್, ಮೊಹಮ್ಮದ್ ಶಫ್ಫಾಫ್ ಗಂಜಿಮಠ, ಬೈರೋಝ್ ಬಬ್ಬುಕಟ್ಟೆ, ನೌಷಾದ್ ಸಾಲ್ಮರ ಭಾಗವಹಿಸಿದ್ದರು.

ರಕ್ತದಾನ ಶಿಬಿರದಲ್ಲಿ ಒಟ್ಟು 49 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ರಕ್ತದಾನ ಮಾಡಿದ ಪ್ರತಿಯೊಬ್ಬರಿಗೂ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ರಕ್ತದಾನ ಶಿಬಿರದ ಉಸ್ತುವಾರಿಗಳಾಗಿ ಬ್ಲಡ್ ಡೋನರ್ಸ್ ಮಂಗಳೂರು ಸಂಸ್ಥೆಯ ದುಬೈ ಕಾರ್ಯನಿರ್ವಾಹಕರಾದ ಅರ್ಶಾದ್ ಬಾಂಬಿಲ, ಕೆ.ಕೆ.ಜಬ್ಬಾರ್, ಸಾದಿಕ್ ಪುತ್ತೂರು, ಮೊಹಮ್ಮದ್ ಶಮೀರ್ ಉಡುಪಿ ಹಾಗೂ ನಝೀರ್ ಬಿಕರ್ನಕಟ್ಟೆ ವಹಿಸಿದ್ದರು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News