ಮೂಡುಬಿದಿರೆ; ಚಿಕ್ಕಪ್ಪನಿಂದಲೇ ಬಾಲಕಿಯ ಅತ್ಯಾಚಾರ: ದೂರು

Update: 2021-08-10 17:50 GMT

ಮೂಡುಬಿದಿರೆ, ಆ.10: ಬಾಲಕಿಯನ್ನು ಅತ್ಯಾಚಾರವೆಸಗಿದ ಆರೋಪದಲ್ಲಿ ಆಕೆಯ ಚಿಕ್ಕಪ್ಪನನ್ನು ಪೊಕ್ಸೊ ಕಾಯ್ದೆಯಡಿ ಮೂಡುಬಿದಿರೆ ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

ಕುಮಾರ್ (30) ಅತ್ಯಾಚಾರವೆಸಗಿದ ಆರೋಪಿ ಎಂದು ಗುರುತಿಸಲಾಗಿದೆ.

ಸೋಮವಾರ ಶಾಲೆಯಿಂದ ಸ್ನೇಹಿತೆಯೊಂದಿಗೆ ಮನೆಗೆ ತೆರಳುತ್ತಿದ್ದ ಸಂದರ್ಭ ಗುಡ್ಡ ಪ್ರದೇಶದಲ್ಲಿ ಬಾಲಕಿಯ ಚಿಕ್ಕಪ್ಪ ಅಡ್ಡಗಟ್ಟಿ ವಿದ್ಯಾರ್ಥಿನಿಯರನ್ನು ಹೆದರಿಸಿದ್ದು ಆಗ ಜೊತೆಗಿದ್ದ ವಿದ್ಯಾರ್ಥಿನಿ ಹೆದರಿ ಓಡಿದ್ದಾಳೆ. ಈ ವೇಳೆ ಆರೋಪಿ ತನ್ನ ಅಣ್ಣನ ಮಗಳನ್ನೆ ಅತ್ಯಾಚಾರ ನಡೆಸಿರುವುದಾಗಿ ಆರೋಪಿಸಲಾಗಿದೆ.

ಈ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News