ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಮಲಯಾಳಿಗಳಿಗೆ ಓಣಂ ಉಡುಗೊರೆ: ಶ್ರೀಜೇಶ್

Update: 2021-08-11 05:42 GMT
photo: ANI

ಹೊಸದಿಲ್ಲಿ: ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವುದು ಮಲಯಾಳಿಗಳಿಗೆ ಓಣಂ ಉಡುಗೊರೆಯಾಗಿದೆ ಎಂದು ಭಾರತ ಪುರುಷರ ಹಾಕಿ ತಂಡದ ಗೋಲ್‌ಕೀಪರ್ ಪಿ.ಆರ್. ಶ್ರೀಜೇಶ್ ಬುಧವಾರ ಹೇಳಿದ್ದಾರೆ.

ಪಿ.ಆರ್. ಶ್ರೀಜೇಶ್ ಅವರಿಗೆ ಕೊಚ್ಚಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ದೊರೆಯಿತು.

"ಇದು ಬಹುನಿರೀಕ್ಷಿತ ಪದಕವಾಗಿದೆ. ಇದು ಮಲಯಾಳಿಗಳಿಗೆ ಉತ್ತಮ ಓಣಂ ಉಡುಗೊರೆಯಾಗಿರಲಿ" ಎಂದು ಶ್ರೀಜೇಶ್ ಹೇಳಿದರು.

ಸೋಮವಾರ, ಪಿ.ಆರ್. ಶ್ರೀಜೇಶ್ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆಲ್ಲುವುದು "ಭಾರತೀಯ ಹಾಕಿಯ ಪುನರ್ಜನ್ಮ" ಎಂದು ಬಣ್ಣಿಸಿದ್ದರು.

ಟೋಕಿಯೊದಲ್ಲಿ  ಕಂಚಿನ ಪದಕವನ್ನು ಗೆಲ್ಲುವ ಮೂಲಕ 41 ವರ್ಷಗಳ ಒಲಿಂಪಿಕ್ಸ್ ಪದಕ ಬರವನ್ನು ನೀಗಿಸಿಕೊಂಡ ಭಾರತೀಯ ಪುರುಷರ ಹಾಕಿ ತಂಡ ಅಂತರ್ ರಾಷ್ಟ್ರೀಯ ಹಾಕಿ ಫೆಡರೇಶನ್ (ಎಫ್ಐಎಚ್) ವಿಶ್ವ ಶ್ರೇಯಾಂಕದಲ್ಲಿ ಕ್ರಮವಾಗಿ ಬೆಲ್ಜಿಯಂ ಮತ್ತು ಆಸ್ಟ್ರೇಲಿಯಾದ ನಂತರ 3 ನೇ ಸ್ಥಾನಕ್ಕೆ ಏರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News