×
Ad

ಭಟ್ಕಳ ಅಂಜುಮನ್ ವಿದ್ಯಾರ್ಥಿಗಳಿಂದ ಬೀಚ್ ಸ್ವಚ್ಛತಾ ಯಂತ್ರ ಆವಿಷ್ಕಾರ

Update: 2021-08-11 16:11 IST

ಭಟ್ಕಳ : ಇಲ್ಲಿನ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಆವಿಷ್ಕರಿಸಿದ ಬೀಚ್ ಸ್ವಚ್ಚತಾ ಯಂತ್ರಕ್ಕೆ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿದ್ಯಾಮಂಡಳಿ ಅನುಮೋದನೆ ನೀಡಿದೆ.

ಬಿಇ ಮೆಕ್ಯಾನಿಕಲ್‌ನ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸಫ್ವಾನ್, ಅರ್ಸಲಾನ್, ಮುಹಮ್ಮದ್ ಸಾರಿಕ್ ಹಾಗೂ ಮುಬಾರಕ್ ಶೇಖ್ ಅವರು ಉಪನ್ಯಾಸ ಡಾ. ಪದ್ಮಯ್ಯ ಎಸ್. ನಾಯ್ಕ ಅವರ ಮಾರ್ಗದರ್ಶನದಲ್ಲಿ ಬೀಚ್ ಸ್ವಚ್ಛತಾ ಯಂತ್ರ ಆವಿಷ್ಕರಿಸಿ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳು ಆವಿಷ್ಕರಿಸಿರುವ ನೂತನ ಯಂತ್ರದಿಂದ ಸಮುದ್ರ ತೀರದಲ್ಲಿ ಪ್ಲಾಸ್ಟಿಕ್ ಬಾಟಲಿಗಳು ಸೇರಿದಂತೆ ತ್ಯಾಜ್ಯಗಳನ್ನು ಸರಾಗವಾಗಿ ರಿಮೋಟ್‌ನ ಮೂಲಕ ಸಮರ್ಕವಾಗಿ ಸ್ವಚ್ಛಗೊಳಿಸಬಹುದಾಗಿದೆ.

ಯಶಸ್ವೀ ಆವಿಷ್ಕಾರದ ಕುರಿತು ಮಾತನಾಡಿದ ಡಾ. ಪದ್ಮಯ್ಯ ನಾಯ್ಕ ಅವರು, ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಆವಿಷ್ಕರಿಸಿದ ಯಂತ್ರದಿಂದ ಕಡಲ ತೀರದಲ್ಲಿನ ತ್ಯಾಜ್ಯಗಳನ್ನು ಸ್ವಚ್ಛಗೊಳಿಸಲು ಅನುಕೂಲವಾಗಿದೆ. ವಿದ್ಯಾರ್ಥಿಗಳು ಶ್ರಮವಹಿಸಿ ಸ್ವಚ್ಛತಾ ಯಂತ್ರ ತಯಾರಿಸಿದ್ದಾರೆ. ವಿದ್ಯಾರ್ಥಿಗಳು ಸಂಶೋಧನೆ ನಡೆಸುತ್ತಿದ್ದು, ಇನ್ನೂ ಹೆಚ್ಚಿನ ಜನೋಪಯೋಗಿ ಯೋಜನೆಗಳ ನೂತನ ಅವಿಷ್ಕಾರಗಳು ನಡೆಯಲಿ ಎಂದು ಆಶಿಸಿದರು.

ಡಾ. ಪದ್ಮಯ್ಯ ನಾಯ್ಕರ ಮಾರ್ಗದ ರ್ನದಲ್ಲಿ ಈ ಹಿಂದೆಯೂ ವಿದ್ಯಾರ್ಥಿಗಳು ಜನೋಪಯೋಗಿ ಯೋಜನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News