×
Ad

ವಿದೇಶಕ್ಕೆ ಉದ್ಯೋಗಕ್ಕಾಗಿ ತೆರಳುವಾಗ ಇರಲಿ ಎಚ್ಚರ : ಇವು ಕರ್ನಾಟಕದ ಅಧಿಕೃತ ಎಜೆನ್ಸಿಗಳು

Update: 2021-08-11 16:20 IST
ಶುಭಂ ಸಿಂಗ್

ಮಂಗಳೂರು, ಆ.11: ಉದ್ಯೋಗಕ್ಕಾಗಿ ವಿದೇಶಕ್ಕೆ ತೆರಳುವವರು ವಲಸಿಗರ ರಕ್ಷಕ (ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್- ಪಿಒಇ) ಕಚೇರಿಯಿಂದ ನೋಂದಣಿ ಪ್ರಮಾಣ ಪತ್ರವನ್ನು ಪಡೆದ ಅಧಿಕೃತ ಏಜೆಂಟ್ ಸಂಸ್ಥೆಗಳ ಮೂಲಕವೇ ವ್ಯವಹರಿಸಬೇಕು ಬೇಕು ಎಂದು ಐಎಫ್‌ಎಸ್ ಅಧಿಕಾರಿ ಹಾಗೂ ಕರ್ನಾಟಕ, ಗೋವಾದ ವಲಸಿಗರ ರಕ್ಷಕ (ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್) ಕಚೇರಿಯ ಮುಖ್ಯಸ್ಥರಾದ ಶುಭಂ ಸಿಂಗ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ಕರ್ನಾಟಕದಲ್ಲಿ ಪ್ರಸಕ್ತ 33 ಏಜೆನ್ಸಿಗಳು ಪ್ರಮುಖ ಶಾಖೆಗಳು ಹಾಗೂ 4 ಶಾಖಾ ಕಚೇರಿಗಳು ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್- ಪಿಒಇ ಕಚೇರಿಯಲ್ಲಿ ನೋಂದಾವಣೆಗೊಂಡಿವೆ ಎಂದು ಅವರು ‘ವಾರ್ತಾಭಾರತಿ’ಗೆ ತಿಳಿಸಿದ್ದಾರೆ.

ಕರ್ನಾಟಕದ ನೋಂದಾಯಿತ ಏಜೆನ್ಸಿಗಳು

ದಿ ಅಮೀನ್ ಗ್ರೂಪ್ (ಬೆಂಗಳೂರು), ಜಾಬ್‌ ಕ್ರಾಫ್ಟ್ (ಬೆಂಗಳೂರು), ರಹ್ಮಾನ್ ಎಂಟರ್‌ ಪ್ರೈಸಸ್ (ಬೆಂಗಳೂರು), ಸೀಮಾ ಎಂಟರ್‌ ಪ್ರೈಸಸ್ (ಬೆಂಗಳೂರು), ಯುತಲಿಯ ಎಚ್‌ಆರ್ ಸೊಲ್ಯೂಶನ್ಸ್ ಪ್ರೈ.ಲಿ. (ಬೆಂಗಳೂರು), ದುರು ಕಾರ್ಪೊರೇಶನ್ ಪ್ರೈವೇಟ್ (ಬೆಂಗಳೂರು), ಕೆ.ಎಸ್‌.ಯು.ಡಬ್ಲು.ಎಸ್‌.ಎಸ್‌.ಬಿ (ಬೆಂಗಳೂರು), ಕೆ.ವಿ.ಟಿ.ಎಸ್‌.ಡಿ.ಸಿ (ಬೆಂಗಳೂರು), ಇಂಟರ್‌ ನ್ಯಾಷನಲ್ ಔಟ್‌ ಸೋರ್ಸಿಂಗ್ ಕನ್ಸಲ್ಟಿಂಗ್ ಸರ್ವಿಸಸ್ (ಬೆಂಗಳೂರು), ಮೆಸರ್ಸ್ ಡಿಕೆಎನ್ ಎಡ್ವೈಸರಿ (ಬೆಂಗಳೂರು), ಕೆರಿಯರ್ಸ್ ಇಂಟರ್‌ ನ್ಯಾಷನಲ್ (ಮಂಗಳೂರು), ಮೆಸರ್ಸ್ ರಾಯಲ್ ಸೋರ್ಸ್ ಮ್ಯಾನ್‌ ಪವರ್ ಸೊಲ್ಯೂಶನ್ಸ್ ಎಲ್‌ಎಲ್‌ಪಿ (ಮೂಡಬಿದ್ರೆ), ಎವರ್‌ ಸರ್ವ್ ಕನ್ಸಲ್ಟಂಟ್ಸ್ ಪ್ರೈವೇಟ್ (ಮಂಗಳೂರು), ರಾಯ್‌ ವಿನ್ ರಿಕ್ರೂಟರ್ಸ್ (ಬಂಟ್ವಾಳ), ಸುಹಾನ ಟ್ರಾವೆಲ್ಸ್ (ಮಂಗಳೂರು), ಜೆಮಿನಿ ಎಂಟರ್‌ ಪ್ರೈಸರ್ಸ್ (ಮಂಗಳೂರು), ಆ್ಯಸ್‌ ಮ್ಯಾಕ್ಸ್ ಕನ್ಸಲ್ಟೆಂಟ್ಸ್ (ಮಂಗಳೂರು), ಅಲ್ ವಹಿದ್ ರಿಕ್ರೂಟರ್ (ಧಾರವಾಡ), ಬರಾಕ್ ಕನ್ಸಲ್ಟೆನ್ಸಿ (ಹುಬ್ಬಳ್ಳಿ). ಮೆಸರ್ಸ್ ಮಾಸ್ಟರ್ ಸಲ್ಯೂಶನ್ಸ್ (ಮಂಗಳೂರು), ಮೆಸರ್ಸ್ ಬ್ರಾಡ್‌ ಫೋರ್ಡ್ ಗ್ಲೋಬಲ್ ಎಂಟರ್‌ಪ್ರೈಸಸ್ ಪ್ರೈ. ಲಿ. (ಬೆಂಗಳೂರು), ಮೆಸರ್ಸ್ ಒಪರ್ಚುನಿಟಿ ಲ್ಯಾಬ್ಸ್ ಪ್ರೈ.ಲಿ. (ಬೆಂಗಳೂರು), ಮೆಸರ್ಸ್ ಕೆರಿಯರ್ ರೆನ್ ಸ್ಟಾಫಿಂಗ್ ಸೊಲ್ಯೂಶನ್ಸ್ (ಬೆಂಗಳೂರು), ಮೆಸರ್ಸ್ ಕೆರಿಯರ್ ಪಾಯಿಂಟ್ (ಮಂಗಳೂರು), ಮೆಸರ್ಸ್ ಸಿಲ್ವರ್ ಪೀಕ್ ಗ್ಲೋಬಲ್ ಪ್ರೈ. ಲಿ. (ಬೆಂಗಳೂರು), ಮೆಸರ್ಸ್ ಮಾಸ್ಟರ್ ಪವರ್ ಸರ್ವಿಸಸ್ (ಉಡುಪಿ), ಮೆಸರ್ಸ್ 4 ಕಾರ್ನರ್ಸ್ ಮ್ಯಾನ್‌ ಪವರ್ ಏಜೆನ್ಸಿ (ಉಡುಪಿ), ಮೆಸರ್ಸ್ ಸ್ಕೈವೇ ರಿಕ್ರೂಟರ್ಸ್ (ಮಂಗಳೂರು), ಎಕ್ಸ್‌ಪ್ರೆಸ್ ಟೂರ್ಸ್ ಆ್ಯಂಡ್ ಟ್ರಾವೆಲ್ (ಮಂಗಳೂರು), ಮೆಸರ್ಸ್ ವೀಡೆ ಕನ್‌ಸಲ್ಟಂಟ್ಸ್ (ಬೆಂಗಳೂರು), ಮೆಸರ್ಸ್ ಫ್ಲೈಕಿಂಗ್ ಇಂಟರ್‌ ನ್ಯಾಷನಲ್ (ಮಂಗಳೂರು), ಮೆಸರ್ಸ್ ಅಲ್ ಫಾರಿಶ್ ಇಂಟರ್‌ ನ್ಯಾಷನಲ್ (ಮಂಗಳೂರು), ಮೆಸರ್ಸ್ ಎಂಎ ಎಂಟರ್‌ಪ್ರೈಸಸ್ (ಮಂಗಳೂರು). 

ಶಾಖಾ ಕಚೇರಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಏಜೆನ್ಸಿಗಳು

ಮೆಸರ್ಸ್ ಇಂಟರ್‌ ನ್ಯಾಷನಲ್ ಔಟ್ ಸೋರ್ಸಿಂಗ್ ಕನ್‌ ಸಲ್ಟಿಂಗ್ ಸರ್ವಿಸಸ್ (ಮಂಗಳೂರು), ಮೆಸರ್ಸ್ ಜೆರಿ ವರ್ಗೀಸ್ ಕನ್‌ಸಲ್ಟಂಟ್ಸ್ (ಬೆಂಗಳೂರು), ಮೆಸರ್ಸ್ ರಹ್ಮಾನ್ ಎಂಟರ್‌ ಪ್ರೈಸಸ್ (ಬೆಂಗಳೂರು), ಮೆಸರ್ಸ್ ಹೀರಾ ಇಂಟರ್‌ ನ್ಯಾಷನಲ್ ಟ್ರಾವೆಲ್ ಸರ್ವಿಸಸ್ (ಮಂಗಳೂರು)

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News