"ಬಿರ್ದ್ ದ ಕಂಬುಲ" ತುಳು ಚಲನ ಚಿತ್ರದ ಶೀರ್ಷಿಕೆ ಬಿಡುಗಡೆ: ಎಸ್.ವಿ.ಬಾಬು ರಾಜೇಂದ್ರ
ಮಂಗಳೂರು : ತುಳು ನಾಡಿನ ಕಂಬಳ ಬಗ್ಗೆ "ಬಿರ್ದ್ ದ ಕಂಬುಲ" (ವೀರ ಕಂಬಳ) ಎಂಬ ತುಳು ಚಲನ ಚಿತ್ರವನ್ನು ನಿರ್ಮಿಸುವ ಉದ್ದೇಶದಿಂದ ಶೀರ್ಷಿಕೆ ಬಿಡುಗಡೆ ಮಾಡಿರುವುದಾಗಿ ಬಾಬು ರಾಜೇಂದ್ರ ಸಿಂಗ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವ ಅಂಗಾರ ಶೀರ್ಷಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಅಂತರಾಷ್ಟ್ರೀಯ ಗುಣಮಟ್ಟದ ಮತ್ತು ಆಸ್ಕರ್ ಪ್ರಶಸ್ತಿಗೂ ಸ್ಪರ್ಧಿಸುವ ಗುಣಮಟ್ಟದ ಚಲನಚಿತ್ರವನ್ನು ತುಳು ನಾಡಿನ ಕಂಬಳದ ಬಗ್ಗೆ ನಿರ್ಮುಸಬೇಕು ಎನ್ನುವ ಗುರಿ ಹೊಂದಿದ್ದೇನೆ. ಈ ಚಲನ ಚಿತ್ರವನ್ನು ಕನ್ನಡ, ತಮಿಳು, ತೆಲುಗು, ಹಿಂದಿಗೂ ಡಬ್ಬಿಂಗ್ ಮಾಡುವ ಉದ್ದೇಶ ಇದೆ. ಆಂಗ್ಲ ಭಾಷೆಯಲ್ಲೂ ಈ ಚಲನಚಿತ್ರನ್ನು ಬಿಡುಗಡೆ ಮಾಡುವ ಉದ್ದೇಶ ಹೊಂದಿರುವುದಾಗಿ ಬಾಬು ರಾಜೇಂದ್ರ ಸಿಂಗ್ ತಿಳಿಸಿದ್ದಾರೆ.
ಮಂಗಳೂರು ನಗರ ಫಿಲಂ ಸಿಟಿ ಮಾಡುವುದಕ್ಕೆ ಸೂಕ್ತವಾದ ಪ್ರದೇಶ ಈ ಬಗ್ಗೆ ಗಮನ ಹರಿಸಬೇಕಾಗಿದೆ. ಕಂಬಳ ರಾಷ್ಟ್ರೀಯ ಮನ್ನಣೆ ಪಡೆಯಬೇಕಾದ ಕ್ರೀಡೆ ಈ ನಿಟ್ಟಿನಲ್ಲಿ ಸಿನಿಮಾ ಮಾಧ್ಯಮದ ಮೂಲಕವೂ ಈ ರೀತಿಯ ಒಂದು ಪ್ರಯತ್ನ ಮಾಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ವಿವಿಧ ಭಾಷೆಗಳಲ್ಲಿ ಸುಮಾರು 97ಕ್ಕೂ ಅಧಿಕ ಚಲನಚಿತ್ರ ಮಾಡಿರುವ ಬಾಬು ರಾಜೇಂದ್ರ ಸಿಂಗ್ ತುಳುವಿನಲ್ಲಿ ಪ್ರಥಮ ಬಾರಿಗೆ ಕಂಬಳದ ಬಗ್ಗೆ ಚಲನಚಿತ್ರ ಮಾಡುತ್ತಿದ್ದಾರೆ.ಈ ಬಗ್ಗೆ ತಜ್ಞರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಇದರಲ್ಲಿ ಹಿಂಸೆ ಇರುವುದಿಲ್ಲ ಇಲ್ಲಿನ ಸಾಂಸ್ಕೃತಿಕ ಮಹತ್ವ ಗಳು ಇರುತ್ತವೆ ಎಂದು ಚಿತ್ರದ ಸಂಭಾಷಣೆ ಗಾರ ಖ್ಯಾತ ತುಳು ರಂಗಭೂಮಿ ಹಾಗೂ ಚಲನ ಚಿತ್ರದ ನಿರ್ದೇಶಕ ವಿಜಯ ಕುಮಾರ್ ಕೊಡಿಯಾಲಬೈಲ್ ತಿಳಿಸಿದ್ದಾರೆ.
ಕಂಬಳದ ಬಗ್ಗೆ ಸಮಗ್ರ ಮಾಹಿತಿ ಮಹತ್ವವನ್ನು ತಿಳಿಯ ಪಡಿಸುವ ಕೊರತೆ ಇದೆ ಆ ದೃಷ್ಟಿಯಿಂದ ಬಿರ್ದ್ ದ ಕಂಬುಲ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಕಂಬಳ ಅಕಾಡೆಮಿಯ ಅಧ್ಯಕ್ಷ ಗುಣಪಾಲ ಕಡಂಬ ತಿಳಿಸಿದ್ದಾರೆ.
ಚಲನಚಿತ್ರ ದ ನಿರ್ಮಾಪಕ ಅರುಣ್ ರೈ ತೋಡಾರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.