×
Ad

ಶೇಖರಿಸಿಟ್ಟಿರುವ ಆಹಾರ ಧಾನ್ಯಗಳು ಕೊಳೆತುಹೋಗಿಲ್ಲ ಎಂದ ಕೇಂದ್ರ: ʼಸುಳ್ಳು ಹೇಳುತ್ತಿದ್ದೀರಿʼ ಎಂದ ಸಾಕೇತ್‌ ಗೋಖಲೆ

Update: 2021-08-11 18:24 IST

ಹೊಸದಿಲ್ಲಿ : ಕೇಂದ್ರ ಶೇಖರಿಸಿರುವ ಆಹಾರ ಧಾನ್ಯಗಳು (ಗೋಧಿ ಮತ್ತು ಅಕ್ಕಿ) ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಸೆಂಟ್ರಲ್ ವೇರ್ ಹೌಸಿಂಗ್ ಕಾರ್ಪೊರೇಷನ್ ಗೋದಾಮುಗಳ ಕೊರತೆ ಅಥವಾ ಇನ್ನಿತರ ಸಮಸ್ಯೆಗಳಿಂದಾಗಿ ಕಳೆದ ಐದು ವರ್ಷಗಳ ಅವಧಿಯಲ್ಲಿ ಯಾವತ್ತೂ ಕೊಳೆತು ಹೋಗಿಲ್ಲ ಅಥವಾ ಹಾಳಾಗಿಲ್ಲ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ನಾಗರಿಕ ಸರಬರಾಜು ಸಚಿವಾಲಯ ಸಂಸತ್ತಿನಲ್ಲಿ ಸಂಸದರಾದ ರವೀಂದ್ರ  ಖುಶ್ವಾಹ ಹಾಗೂ ಲಲ್ಲು ಸಿಂಗ್ ಕೇಳಿದ ಪ್ರಶ್ನೆಗೆ ನೀಡಿರುವ ಉತ್ತರವನ್ನು  ಸಾಮಾಜಿಕ ಹೋರಾಟಗಾರ ಸಾಕೇತ್ ಗೋಖಲೆ ಪ್ರಶ್ನಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮತ್ತೊಮ್ಮೆ ಲೋಕಸಭೆಯಲ್ಲಿ ಸುಳ್ಳು ಹೇಳಿದೆ ಎಂದು ಬರೆದಿದ್ದಾರಲ್ಲದೆ ತಮ್ಮ ಟ್ವೀಟ್‍ನಲ್ಲಿ ದಿ ವೈರ್  ವರದಿಯೊಂದನ್ನೂ ಟ್ಯಾಗ್ ಮಾಡಿದ್ದಾರೆ.

ಗ್ರಾಹಕ ವ್ಯವಹಾರಗಳ ಸಚಿವಾಲಯದ ಅಂಕಿಅಂಶಗಳ ಪ್ರಕಾರ  ಕಳೆದ ವರ್ಷದ ಜೂನ್ ತಿಂಗಳಲ್ಲಿ 1,453 ಟನ್ ಆಹಾರ ಧಾನ್ಯಗಳಿಗೆ ಹಾನಿಯಾಗಿದೆ ಎಂದು  ವರದಿಯಲ್ಲಿ ಬರೆಯಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News