ಹಿರಿಯ ನಾಗರಿಕರಿಗೆ ಸಾಧನ ಸಲಕರಣೆ: ಅರ್ಜಿ ಆಹ್ವಾನ
Update: 2021-08-11 20:01 IST
ಉಡುಪಿ, ಆ.11: ಪ್ರಸಕ್ತ ಸಾಲಿನಲ್ಲಿ ಅಲಿಮ್ಕೋ ಸಂಸ್ಥೆಯ ವತಿಯಿಂದ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಜಿಲ್ಲೆಯ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಉಚಿತವಾಗಿ ಆರ್ಥೋಪೆಡಿಕ್ (ಮೂಳೆ ಚಿಕಿತ್ಸೆ)/ ದೈಹಿಕ ದುರ್ಬಲತೆ, ಶ್ರವಣದೋಷ, ದೃಷ್ಟಿಹೀನತೆ ಮತ್ತು ವೃದ್ಧಾಪ್ಯ ದಲ್ಲಿ ಹಲ್ಲುಗಳ ನಷ್ಟ ಮುಂತಾದ ತೊಂದರೆಯುಳ್ಳ ಹಿರಿಯ ನಾಗರಿಕರಿಗೆ ಪುನರ್ವಸತಿ ತಜ್ಞರು ಸೂಚಿಸಿದ ಅರ್ಹತೆಗೆ ಅನುಗುಣವಾಗಿ ವಿವಿಧ ಸಾಧನ ಸಲಕರಣೆಗಳನ್ನು ವಿತರಿಸಾಗುತ್ತದೆ.
ಈಗಾಗಲೇ ರಾಷ್ಟ್ರೀಯ ವಯೋಶ್ರೀ ಯೋಜನೆಯಡಿ ಹಿರಿಯ ನಾಗರಿಕರ ನೋಂದಾವಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಹತ್ತಿರದ ಜನ ಸೇವಾ ಕೇಂದ್ರದಲ್ಲಿ ಆನ್‌ಲೈನ್ ಮೂಲಕ ನೋಂದಾವಣಿಯನ್ನು ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಿವಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ದೂರವಾಣಿ ಸಂಖ್ಯೆ 0820-2574810/811ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.