ಕಾರ್ಕಳ: ವಿದ್ಯುತ್ ಬೇಲಿಯ ತಂತಿ ತಗುಲಿ ಮೃತ್ಯು
Update: 2021-08-11 21:14 IST
ಕಾರ್ಕಳ, ಆ.11: ಕೃಷಿ ತೋಟಕ್ಕೆ ಆಳವಡಿಸಿದ ವಿದ್ಯುತ್ ಬೇಲಿಯ ತಂತಿ ತಾಗಿ ವ್ಯಕ್ತಿ ಯೊಬ್ಬರು ಮೃತಪಟ್ಟ ಘಟನೆ ಮಾಳ ಗ್ರಾಮದ ಮುಳ್ಳೂರು ಎಂಬಲ್ಲಿ ಆ.10 ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಮಾಳ ಕೂಡಬೆಟ್ಟು ನಿವಾಸಿ ಸೋಮನಾಥ ಡೋಂಗ್ರೆ ಎಂದು ಗುರುತಿಸಲಾಗಿದೆ.
ವಿರೇಶ್ವರ ಡೋಂಗ್ರೆ ಎಂಬವರ ಮನೆಗೆ ನಡೆದುಕೊಂಡು ಹೋಗುತ್ತಿದ್ದ ಸೋಮನಾಥ ಡೋಂಗ್ರೆಗೆ ವೆಂಕಟೇಶ ಜೋಷಿ ಅವರ ಕೃಷಿ ತೋಟಕ್ಕೆ ಅಳವಡಿಸಿದ ವಿದ್ಯುತ್ ಬೇಲಿಯ ತಂತಿ ತಾಗಿತ್ತೆನ್ನಲಾಗಿದೆ. ಇದರಿಂದ ಗಂಭೀರವಾಗಿ ಅಸ್ವಸ್ಥಗೊಂಡ ಅವರು ಸ್ಥಳದಲ್ಲಿಯೇ ಬಿದ್ದು ಮೃತಪಟ್ಟಿ ದ್ದಾರೆ. ಈ ಘಟನೆಗೆ ವೆಂಕಟೇಶ ಜೋಷಿಯವರ ನಿರ್ಲಕ್ಷವೇ ಕಾರಣ ಎಂದು ದೂರಲಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.