ಮುದ್ರಾ ಲೋನ್ ಹೆಸರಿನಲ್ಲಿ ಲಕ್ಷಾಂತರ ರೂ. ವಂಚನೆ: ದೂರು
Update: 2021-08-11 21:16 IST
ಉಡುಪಿ, ಆ.11: ಮುದ್ರಾ ಲೋನ್‌ನಿಂದ ಸಾಲ ನೀಡುವುದಾಗಿ ನಂಬಿಸಿ ಕಾರ್ಕಳದ ಮುಂಡ್ಕೂರಿನ ಸಿರಾಜ್(26) ಎಂಬವರಿಗೆ ಲಕ್ಷಾಂತರ ರೂ. ಹಣ ವಂಚನೆ ಮಾಡಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರು ಆನ್‌ಲೈನ್‌ಲ್ಲಿ ಸಾಲ ಪಡೆಯಲು ಗೂಗಲ್ನ ಲೋನ್ ಆ್ಯಪ್‌ನಲ್ಲಿ ತಮ್ಮ ಹೆಸರು ಮತ್ತು ಫೋನ್ ನಂಬರ್ ದಾಖಲಿಸಿದ್ದರು. ಮೂರು ದಿನಗಳ ನಂತರ ಇವರಿಗೆ ಅಪರಿಚಿತರು ಕರೆ ಮಾಡಿ ಮುದ್ರಾ ಲೋನ್‌ನಿಂದ ಮಾತನಾ ಡುವುದಾಗಿ ನಂಬಿಸಿ ತೆರಿಗೆ ಕಟ್ಟುವಂತೆ ತಿಳಿಸಿ, ಬ್ಯಾಂಕ್ ಖಾತೆಯನ್ನು ನೀಡಿದ್ದರು.
ಅದರಂತೆ ಸಿರಾಜ್, ಅವರು ತಿಳಿಸಿದ ಖಾತೆಗೆ ಜೂ.25ರಿಂದ ಜು.17ರವರೆಗೆ ಒಟ್ಟು 2,36,700ರೂ. ಹಣವನ್ನು ವರ್ಗಾವಣೆ ಮಾಡಿದ್ದರು. ಆದರೆ ಅಪರಿಚಿತರು ಸಿರಾಜ್‌ಗೆ ಸಾಲವನ್ನು ನೀಡಿದೆ ಕಟ್ಟಿದ ಹಣವನ್ನು ನೀಡದೇ ಮೋಸ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.