×
Ad

ಆ. 16ರಿಂದ ಮಂಗಳೂರು ಸೆಂಟ್ರಲ್-ಮಡಗಾಂವ್ ದೈನಂದಿನ ರೈಲು ಸಂಚಾರ ಪ್ರಾರಂಭ

Update: 2021-08-11 21:20 IST

ಉಡುಪಿ, ಆ.11: ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ದೈನಂದಿನ ವಿಶೇಷ ರೈಲು ಆ.16ರಿಂದ ಮತ್ತೆ ತನ್ನ ಸಂಚಾರವನ್ನು ಪ್ರಾರಂಭಿಸಲಿದೆ ಎಂದು ಕೊಂಕಣ ರೈಲ್ವೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ರೈಲು ನಂ.06602 ಮಂಗಳೂರು ಸೆಂಟ್ರಲ್-ಮಡಗಾಂವ್ ಜಂಕ್ಷನ್ ದೈನಂದಿನ ವಿಶೇಷ ರೈಲು ಆ.16ರಿಂದ ಮುಂದಿನ ಪ್ರಕಟಣೆಯ ದಿನಾಂಕದವ ರೆಗೆ ಪ್ರತಿದಿನ ಮುಂಜಾನೆ 5:30ಕ್ಕೆ ಮಂಗಳೂರು ಸೆಂಟ್ರಲ್‌ನಿಂದ ನಿರ್ಗಮಿಸಲಿದ್ದು, ಅದೇ ದಿನ ಅಪರಾಹ್ನ 2 ಗಂಟೆಗೆ ಮಡಗಾಂವ್ ಜಂಕ್ಷನ್ ತಲುಪಲಿದೆ.

ರೈಲು ನಂ.06601 ಮಡಗಾಂವ್ ಜಂಕ್ಷನ್- ಮಂಗಳೂರು ಸೆಂಟ್ರಲ್ ದೈನಂದಿನ ವಿಶೇಷ ರೈಲು ಆ.16ರಿಂದ ಮುಂದಿನ ಪ್ರಕಟಣೆಯವರೆಗೆ ಪ್ರತಿದಿನ ಅಪರಾಹ್ನ 2:30ಕ್ಕೆ ಮಡಗಾಂವ್ ಜಂಕ್ಷನ್‌ನಿಂದ ನಿರ್ಗಮಿಸಲಿದ್ದು, ಅದೇ ದಿನ ರಾತ್ರಿ 9:40ಕ್ಕೆ ಮಂಗಳೂರು ಸೆಂಟ್ರಲ್ ತಲುಪಲಿದೆ.

ಈ ರೈಲಿಗೆ ಮಂಗಳೂರು ಜಂಕ್ಷನ್, ತೋಕೂರು, ಸುರತ್ಕಲ್, ಮೂಲ್ಕಿ, ನಂದಿಕೂರು, ಪಡುಬಿದ್ರಿ, ಇನ್ನಂಜೆ, ಉಡುಪಿ, ಬಾರಕೂರು, ಕುಂದಾಪುರ, ಸೇನಾಪುರ, ಬೀಜೂರು, ಮುಕಾಂಬಿಕಾ ರೋಡ್ ಬೈಂದೂರು, ಶಿರೂರು, ಭಟ್ಕಳ, ಚಿತ್ರಾಪುರ, ಮುರ್ಡೇಶ್ವರ, ಮಂಕಿ, ಹೊನ್ನಾವರ, ಕುಮಟಾ, ಮಿರ್ಜಾನ, ಗೋಕರ್ಣ ರೋಡ್, ಅಂಕೋಲ, ಹಾರವಾಡ, ಕಾರವಾರ, ಅಸ್ಗೋಟಿ, ಲೋಯಿಮ್, ಕ್ಯಾನ್‌ಕೋನಾ ಹಾಗೂ ಬಲ್ಲಿ ಸ್ಟೇಶನ್‌ಗಳಲ್ಲಿ ನಿಲುಗಡೆ ಇರುತ್ತದೆ.

ಸಂಪೂರ್ಣ ರಿಸರ್ವೇಶನ್ ಸೀಟುಗಳ ಮೂಲಕ ಸಂಚರಿಸುವ ಈ ರೈಲು ಒಟ್ಟು 12 ಕೋಚ್‌ಗಳನ್ನು ಹೊಂದಿರುತ್ತದೆ. ಪ್ರಯಾಣಿಕರು ಟಿಕೆಟ್ ಕಾದಿರಿಸಿ ಸಂಚರಿಸುವುದರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಕೋವಿಡ್-19 ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಕೊಂಕಣ ರೈಲ್ವೆ ಪ್ರಕಟಣೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News