ಅಫ್ಘಾನ್ ಗೆ ಭಾರತ ನೀಡಿದ್ದ ಸಮರ ಹೆಲಿಕಾಪ್ಟರ್ ತಾಲಿಬಾನ್ ವಶ
Update: 2021-08-11 22:30 IST
ಹೊಸದಿಲ್ಲಿ,ಆ.11: ಉತ್ತರ ಅಫ್ಘಾನಿಸ್ತಾನದ ಪ್ರಾಂತೀಯ ರಾಜಧಾನಿ ಕುಂದುಝ್ ನ ವಿಮಾನನಿಲ್ದಾಣವನ್ನು ತಮ್ಮ ನಿಯಂತ್ರಣಕ್ಕ್ಕೆ ತೆಗೆದುಕೊಂಡಿರುವ ತಾಲಿಬಾನ್ ಬಂಡು ಕೋರರು, ಅಫ್ಘಾನಿಸ್ತಾನಕ್ಕೆ ಭಾರತ ನೀಡಿದ ಸಮರ ಹೆಲಿಕಾಪ್ಟರ್ ಒಂದನ್ನು ವಶಪಡಿಸಿಕೊಂಡಿದ್ದಾರೆ.
2019ರಲ್ಲಿ ಭಾರತವು ನಾಲ್ಕು ದಾಳಿ ಹೆಲಿಕಾಪ್ಟರ್ಗಳನ್ನು ಅಫ್ಘಾನ್ಗೆ ಕೊಡುಗೆಯಾಗಿ ನೀಡಿತ್ತು. ಇವುಗಳ ಲ್ಲೊಂದಾದ 123 ಸೀರಿಯಲ್ ಸಂಖ್ಯೆಯ ಎಂಐ-24ವಿ ಆ್ಯಟಾಕ್ ಹೆಲಿಕಾಪ್ಟರ್ನ ಪಕ್ಕದಲ್ಲಿ ತಾಲಿಬಾನ್ ಬಂಡುಕೋರರು ನಿಂತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದಾಗಿ ದಿ ಪ್ರಿಂಟ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅಫ್ಘಾನಿಸ್ತಾನ ಹಾಗೂ ಬೆಲಾರಸ್ ನಡುವೆ ಏರ್ಪಟ್ಟಿದ್ದ ಒಪ್ಪಂದದ ಭಾಗವಾಗಿ ಈ ಹೆಲಿಕಾಪ್ಟರ್ಗಳನ್ನು ನೀಡಲಾಗಿತ್ತು. ಆದರೆ ಈ ಹೆಲಿಕಾಪ್ಟರ್ಗಳಿಗೆ ಭಾರತ ಆರ್ಥಿಕ ನೆರವು ಹಾಗೂ ವೈಮಾನಿಕ ಸಿಬ್ಬಂದಿಗೆ ತರಬೇತಿ ನೀಡಿತ್ತು.