ಮಂಗಳೂರು: ಎಲ್‌ಜಿಯಿಂದ ಕೃತಕ ಬುದ್ಧಿವಂತಿಕೆಯ ವಾಷಿಂಗ್ ಮೆಷಿನ್ ಲೋಕಾರ್ಪಣೆ
ಮಂಗಳೂರು, ಆ.10: ಮಂಗಳೂರು ನಗರದ ಕೆ.ಎಸ್.ರಾವ್ ರಸ್ತೆಯಲ್ಲಿನ ಎಲ್‌ಜಿ ಸಂಸ್ಥೆಯ ಮಳಿಗೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಕೃತಕ ಬುದ್ಧಿವಂತಿಕೆಯ ವಾಷಿಂಗ್ ಮೆಷಿನ್ ಸಹಿತ ಹಲವು ಉತ್ಪನ್ನಗಳನ್ನು ಬುಧವಾರ ಸಂಜೆ ಲೋಕಾರ್ಪಣೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯಅತಿಥಿಗಳಾಗಿ ಆಗಮಿಸಿದ್ದ ಐಎಂಎ ಮಂಗಳೂರು ಕಾರ್ಯದರ್ಶಿ ಡಾ.ಅನಿಮೇಶ್ ಜೈನ್, ಖ್ಯಾತ ನೇತ್ರ ತಜ್ಞೆ ಡಾ.ರಶ್ಮಿ ಜೈನ್, ಹೆಸರಾಂತ ಆರ್ಕಿಟೆಕ್ಟ್ ಗುಲ್ಶನ್ ರಾಯ್ ಅವರು ವಾಷಿಂಗ್ ಮೆಷಿನ್ ಸಹಿತ ಇತರ ಉತ್ಪನ್ನಗಳನ್ನು ಮಂಗಳೂರು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು.
ಅತ್ಯಾಧುನಿಕ ಎಐ ಡಿಡಿ ತಂತ್ರಜ್ಞಾನದ ಮೆಷಿನ್ ವಾಷಿಂಗ್ ಮೆಷಿನ್, ಎಲ್‌ಜಿ ಸ್ಟೈಲರ್, ಒಎಲ್‌ಇಡಿ ಜಿ-1 ಸಹಿತ ವಿವಿಧ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು.
ಸಮಾರಂಭದಲ್ಲಿ ಗೌರವ ಅತಿಥಿಗಳಾಗಿ ‘ಗ್ರೂಪ್ 4 ಸ್ಯಾನಿಟರಿ ಪ್ರೈ.ಲಿ.’ನ ಮುಹಮ್ಮದ್ ಬಾವ ಮತ್ತು ಸಹೋದರರು, ಎಲ್‌ಜಿ ಕಂಪೆನಿಯ ಬ್ರಾಂಚ್ ಮ್ಯಾನೇಜರ್ ಅಶ್ವಿನಿ ಕುಮಾರ್, ಎಲ್‌ಜಿ ಏರಿಯ ಸೇಲ್ಸ್ ಮ್ಯಾನೇಜರ್ ಡಿರಿಕ್ ಶೆರೋನ್, ಮಂಗಳೂರು ಡಿಜಿವೆಲ್ ಕಾರ್ಪೊರೇಶನ್‌ನ ಸಂಸ್ಥಾಪಕ ಬಿ.ಬಶೀರ್, ಮಾಲಕ ಬಸಮ್ ಎ.ಕೆ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಫೀಕ್ ಮಾಸ್ಟರ್ ನಿರೂಪಿಸಿದರು. ಬಸಮ್ ವಂದಿಸಿದರು.
ಆ್ಯನಿವರ್ಸರಿ ಸೇಲ್: ಮಂಗಳೂರಿನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಎಲ್‌ಜಿ ಮಳಿಗೆಗೆ ಈಗ ನಾಲ್ಕನೇ ವಾರ್ಷಿಕೋತ್ಸವವಾಗಿದೆ. ಇದರ ಪ್ರಯುಕ್ತ ಗ್ರಾಹಕರಿಗೆ ಕೊಡುಗೆಗಳ ಮಹಾಪೂರವನ್ನೇ ಸಂಸ್ಥೆ ಪ್ರಕಟಿಸುತ್ತಿದೆ.
ಆ.9ರಿಂದ 31ರವರೆಗೆ ಈ ವಾರ್ಷಿಕೋತ್ಸವದ ಮಾರಾಟ ಮೇಳವಿದೆ. ಇದರಲ್ಲಿ ಲಕ್ಕೀ ಡ್ರಾ ಕೂಡ ಇದೆ. ಗ್ರಾಹಕರಿಗೆ ಶೇ.20ರವರೆಗೆ ಕ್ಯಾಶ್ ಬ್ಯಾಕ್ ಅವಕಾಶವಿದೆ. ಅಲ್ಲದೆ, ಉಚಿತ ಗಿಫ್ಟ್‌ಗಳನ್ನು ಗ್ರಾಹಕರು ತಮ್ಮದಾಗಿಸಿಕೊಳ್ಳಬಹುದು ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.