×
Ad

​ಮಂಜೇಶ್ವರ : ಬಾಲಕಿ ನಾಪತ್ತೆ

Update: 2021-08-12 14:48 IST

ಮಂಜೇಶ್ವರ : ಹದಿನೇಳರ ಹರೆಯದ ಬಾಲಕಿಯೋರ್ವಳು ನಿಗೂಢವಾಗಿ  ನಾಪತ್ತೆಯಾದ ಘಟನೆ ಉಪ್ಪಳದಲ್ಲಿ  ನಡೆದಿದೆ.

ಉಪ್ಪಳ  ಹಿದಾಯತ್ ಬಜಾರ್ ನಲ್ಲಿ  ವಾಸವಾಗಿರುವ ಶಿವಮೊಗ್ಗ ಮೂಲದ ಸಾನಿಯಾ ನಾಪತ್ತೆಯಾದ ಬಾಲಕಿ.

ಮಂಗಳವಾರ ಬೆಳಗ್ಗೆ  ಹಾಲು ತರಲೆಂದು  ಅಂಗಡಿಗೆ ತೆರಳಿದ್ದ ಸಾನಿಯಾ ಮನೆಗೆ ಮರಳದೆ ನಾಪತ್ತೆಯಾಗಿದ್ದು, ಹಲವೆಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಬಳಿಕ ಮಂಜೇಶ್ವರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.

ಸಮೀಪದ ಸಿಸಿಟಿವಿಯನ್ನು ಪೊಲೀಸರು ಪರಿಶೀಲಿಸಿದ್ದು,  ಹಲವೆಡೆ ಶೋಧ ಆರಂಭಿಸಿದ್ದಾರೆ. ಕಾಸರಗೋಡು ಡಿವೈಎಸ್ಪಿ ಬಾಲಕೃಷ್ಣನ್ ನಾಯರ್, ಮಂಜೇಶ್ವರ ಠಾಣಾಧಿಕಾರಿ ಎ. ಸಂತೋಷ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News