ರಜಕ ಯಾನೆ ಮಡಿವಾಳರ ಸಂಘ ಅಧ್ಯಕ್ಷರಾಗಿ ಪ್ರದೀಪ್ ಮಡಿವಾಳ
Update: 2021-08-12 16:19 IST
ಉಡುಪಿ, ಆ.12: ಉಡುಪಿ ಅಂಬಾಗಿಲು ಶ್ರೀರಜಕ ಯಾನೆ ಮಡಿವಾಳರ ಸಂಘದ ನೂತನ ಅಧ್ಯಕ್ಷರಾಗಿ ಪ್ರದೀಪ್ ಮಡಿವಾಳ ಹೆರ್ಗ ಅವರನ್ನು ಆಯ್ಕೆ ಮಾಡಲಾಗಿದೆ.
ಇತ್ತೀಚೆಗೆ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಮಾಡ ಲಾಗಿದೆ. ಉಪಾಧ್ಯಕ್ಷರಾಗಿ ಶಂಕರ್ ಜಿ.ಕುಂದರ್, ಪ್ರಧಾನ ಕಾರ್ಯದರ್ಶಿ ಯಾಗಿ ರವಿರಾಜ್ ಕೊಡವೂರು, ಮುಖ್ಯ ಕೋಶಾಧಿಕಾರಿಯಾಗಿ ಉಮೇಶ್ ಹೆರ್ಗ, ಜತೆ ಕಾರ್ಯದರ್ಶಿಯಾಗಿ ಚಂದ್ರಶೇಖರ್ ಕುಂದರ್, ಜತೆ ಕೋಶಾಧಿಕಾರಿಯಾಗಿ ರಮೇಶ್ ಜಿ. ಮಡಿವಾಳ, ಸದಸ್ಯರಾಗಿ ಜಯಂತ್ ಕುಂದರ್, ಕೃಷ್ಣ ಮಡಿವಾಳ ಅಲೆವೂರು, ಗಣೇಶ್ ಮಡಿವಾಳ ಬಡಗಬೆಟ್ಟು, ವಸಂತ ಸಾಲಿಯಾನ್ ಹಿರಿಯಡ್ಕ, ಗೋಪಾಲ ಜಿ.ಕೆ., ಸುಂದರಿ ಕುಂದರ್ ಹಿರಿಯಡ್ಕ, ಯಶೋಧಾ ಕುಂದರ್ ಮಣಿಪಾಲ, ವೀರಭದ್ರ ಮಡಿವಾಳ, ಸಂದೇಶ್ ಹೆರ್ಗ ಆಯ್ಕೆಯಾಗಿ್ದಾರೆ ಎಂದು ಪ್ರಕಟಣೆ ತಿಳಿಸಿದೆ.