ಸಾಲ ತೀರಿಸಲಾಗದೆ ಟೈಲರ್ ಆತ್ಮಹತ್ಯೆ
Update: 2021-08-12 16:21 IST
ಹೆಬ್ರಿ, ಆ.12: ಕೋವಿಡ್‌ನಿಂದ ಕೆಲಸ ಇಲ್ಲದೆ ಸಾಲ ತೀರಿಸಲಾಗದ ಚಿಂತೆ ಯಲ್ಲಿ ಟೈಲರ್ ಆತ್ಮಹತ್ಯೆ ಮಾಡಿಕೊಂಡ ಘಟನೆ ಆ.11ರಂದು ಸಂಜೆ ವೇಳೆ ವರಂಗ ಗ್ರಾಮದ ಮೂಡುಕುಡೂರು ಎಂಬಲ್ಲಿ ನಡೆದಿದೆ.
ಮೃತರನ್ನು ಮೂಡುಕುಡೂರು ನಿವಾಸಿ ಪುಟ್ಟಪ್ಪ ಪೂಜಾರಿ ಎಂಬವರ ಮಗ ಅಶೋಕ ಪೂಜಾರಿ(38) ಎಂದು ಗುರುತಿಸಲಾಗಿದೆ.
ಟೈಲರ್ ವೃತ್ತಿ ಮಾಡಿಕೊಂಡಿದ್ದ ಇವರು ಕೋವಿಡ್ ಕಾರಣದಿಂದ ಕಳೆದ ಮೂರು ತಿಂಗಳಿಂದ ಕೆಲಸವಿಲ್ಲದೆ ಮನೆಯಲ್ಲೇ ಇದ್ದು, ಕೆಲವು ಕಡೆಗಳಲ್ಲಿ ಕೈಸಾಲವನ್ನು ಮಾಡಿಕೊಂಡಿದ್ದರು. ಇದನ್ನು ತೀರಿಸಲಾಗದೆ ಮನನೊಂದ ಅವರು, ಮನೆಯ ಹಿಂದುಗಡೆಯ ಹಟ್ಟಿಯಲ್ಲಿ ನೇಣು ಬಿಗಿದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.