×
Ad

ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಶಾಲೆಗೆ 100 ಶೇ. ಫಲಿತಾಂಶ

Update: 2021-08-12 16:34 IST

ಬಂಟ್ವಾಳ, ಆ.12: 2020-21ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಶಾಲೆ 100 ಶೇಕಡಾ ಫಲಿತಾಂಶ ಪಡೆದಿದೆ. 

ಪರೀಕ್ಷೆ ಬರೆದ ಒಟ್ಟು 100 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 63 ವಿದ್ಯಾರ್ಥಿಗಳು ಪ್ರಥಮ ದರ್ಜೆ, 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.

ವಿದ್ಯಾರ್ಥಿಗಳಾದ ನಫೀಸಾ ತಫಾ - 611, ಫಾತಿಮಾ ಸಾನಿಯಾ - 600, ಫಾತಿಮಾ ತಶಾ – 594, ಮುಹಮ್ಮದ್ ರಾಝಿಕ್ - 583, ಮುಹಮ್ಮದ್ ಶಕೀಲ್ – 582, ಮುಹಮ್ಮದ್ ಫಾಝಿಲ್ – 582 ಅಂಕಗಳನ್ನು ಗಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News