×
Ad

ಸಾರ್ವಜನಿಕರಿಗೆ ತೊಂದರೆಯಾಗುವ ಗೌರವ ವಂದನೆ ಬೇಡ: ಸಿಎಂ ಬಸವರಾಜ ಬೊಮ್ಮಾಯಿ

Update: 2021-08-12 17:15 IST

ಮಂಗಳೂರು, ಆ.12: ಇನ್ನು ಮುಂದೆ ಪೊಲೀಸರು ವಿಮಾನ ನಿಲ್ದಾಣ ಸಹಿತ ಸಾರ್ವಜನಿಕ ಸ್ಥಳಗಳಲ್ಲಿ ಗೌರವ ವಂದನೆ ನೀಡುವುದು ಬೇಡ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದ್ದಾರೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಗೌರವ ವಂದನೆ ನೀಡಿದ ಬಳಿಕ ಸಿಎಂಗೆ ಇದು ಜನರಿಗೆ ಸಮಸ್ಯೆಯಾಗುತ್ತದೆ ಎಂದು ಮನಗಂಡರು. ಆ ಹಿನ್ನೆಲೆಯಲ್ಲಿ ಬಳಿಕ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಕರೆದು ಮಾತನಾಡಿದ ಸಿಎಂ, ಇನ್ನು ಮುಂದೆ ತಾನು ಹೋಗುವಾಗ, ಬರುವಾಗ ಏರ್‌ಪೋರ್ಟ್, ರೈಲ್ವೆಸ್ಟೇಷನ್‌ನಂತಹ ಸಾರ್ವಜನಿಕ ಸ್ಥಳಗಳಲ್ಲಿ ಗೌರವ ರಕ್ಷೆ ನೀಡುವುದು ಬೇಡ, ಇದರಿಂದ ಜನರಿಗೆ ತೊಂದರೆಯಾಗುತ್ತದೆ, ಈ ಬಗ್ಗೆ ಶೀಘ್ರ ಲಿಖಿತ ಆದೇಶ ಹೊರಡಿಸುವುದಾಗಿ ತಿಳಿಸಿದರು.

ಬಿಗುವಿನ ಕ್ರಮ ಅನಿವಾರ್ಯ

ಕೋವಿಡ್ 1, 2ನೇ ಅಲೆಯ ಅನುಭವದ ಆಧಾರದಲ್ಲಿ ಈ ಬಾರಿ ‘ಚಿಕಿತ್ಸೆಗಿಂತ ತಡೆಯುವಿಕೆ ಉತ್ತಮ’ ಎಂಬಂತೆ ಅನೇಕ ನಿರ್ಬಂಧಗಳನ್ನು ಕೈಗೊಂಡಿದ್ದೇನೆ, ನಮ್ಮ ರಾಜ್ಯ ಅತಿ ಹೆಚ್ಚು ಸಂಕಷ್ಟಕ್ಕೊಳಗಾಗಿದೆ. ಈಗಲೇ ತಡೆಯದಿದ್ದರೆ ಮತ್ತೆ ಮುಂದೆ ಲಾಕ್‌ಡೌನ್ ಆಗಿ ಜನರ ಬದುಕು ದುಸ್ತರವಾಗಬಹುದು, ಅದನ್ನು ತಡೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News