ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮ ಬದ್ದಗೊಳಿಸುವ ಯೋಜನೆ
Update: 2021-08-12 19:05 IST
ಉಡುಪಿ, ಆ.12: ಕೃಷಿ ಇಲಾಖೆಯಿಂದ ಒಂದು ಜಿಲ್ಲೆ, ಒಂದು ಉತ್ಪನ್ನದ ಆಧಾರದ ಮೇಲೆ ತೊಡಗಿರುವಂತಹ ಹೊಸ ಘಟಕಗಳಿಗೆ ಆದ್ಯತೆಯ ಮೇರೆಗೆ ತೆಂಗು, ಹಪ್ಪಳ, ಉಪ್ಪಿನಕಾಯಿ, ಸಿರಿಧಾನ್ಯ ಆಧಾರಿತ, ಮಾವು, ಆಲೂಗೆಡ್ಡೆ, ಜೇನು, ಅರಿಶಿನ ನೆಲ್ಲಿ, ಮೀನುಗಾರಿಕೆ, ಕೋಳಿ, ಮಾಂಸ ಹಾಗೂ ಪಶು ಆಹಾರ ಗಳ ಘಟಕಗಳ ಸಾಮರ್ಥ್ಯವನ್ನು ಆಧರಿಸಿ ಆರ್ಥಿಕ ಮತ್ತು ತಾಂತ್ರಿಕ ಉನ್ನತೀಕರಣಕ್ಕಾಗಿ ವೈಯಕ್ತಿಕ ಕಿರು ಉದ್ದಿಮೆಗಳಿಗೆ ಬೆಂಬಲ ಘಟಕದಡಿ ಶೇ.35 ಅಥವಾ ಗರಿಷ್ಟ 10 ಲಕ್ಷ ರೂ. ಸಹಾಯಧನದ ಜೊತೆಗೆ ಬ್ಯಾಂಕ್ ಸಾಲ ಸೌಲಭ್ಯವನ್ನು ನೀಡಲಾಗುವುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಸೂರಜ್ ಶೆಟ್ಟಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿ, ಉಡುಪಿ (ಮೊಬೈಲ್:9019075051/7204192914) ಇವರನ್ನು ಸಂಪರ್ಕಿಸುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.