×
Ad

​ಶೀಘ್ರದಲ್ಲೇ ಮೂಲಗೇಣಿಯ ತೀರ್ಪು: ರಕ್ಷಣಾ ವೇದಿಕೆ

Update: 2021-08-12 20:27 IST

ಮಂಗಳೂರು,ಆ.12: ಮೂಲಗೇಣಿದಾರರಿಗೆ ಭೂ ಒಡೆತನದ ಸಂಪೂರ್ಣ ಹಕ್ಕು ಸಿಗಬೇಕು ಎಂಬ ಉದ್ದೇಶದಿಂದ ಮೂಲಗೇಣಿದಾರ ರಕ್ಷಣಾ ವೇದಿಕೆಯು ಸತತ ಹೋರಾಟ ಮಾಡುತ್ತಾ ಬಂದಿದೆ. ಅದರ ಫಲವಾಗಿ ಸರಕಾರ ನ್ಯಾಯಾಂಗ ವಿಚಾರಣೆಗೆ ಮುಂದಾಗಿದೆ. ಹೈಕೋರ್ಟ್ ಕೂಡ ಸಮ್ಮತಿ ನೀಡಿದ್ದು, ಶೀಘ್ರ ತೀರ್ಪು ಹೊರಬೀಳುವ ಸಾಧ್ಯತೆ ಇದೆ ಎಂದು ವೇದಿಕೆಯ ಮುಖಂಡ ಜೆರಾಲ್ಡ್ ಟವರ್ಸ್ ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವೇದಿಕೆಯಲ್ಲಿ 3 ಸಾವಿರ ಸದಸ್ಯರಿದ್ದಾರೆ. ಆದರೆ ಏಳೆಂಟು ಮಂದಿ ಮಾತ್ರ ಕಾನೂನು ಹೋರಾಟದಲ್ಲಿ ನಿರತರಾಗಿದ್ದಾರೆ. ಓಡಾಟಕ್ಕಾಗಿ ಕೈಯಿಂದಲೇ ಹಣ ಖರ್ಚು ಮಾಡುತ್ತಿದ್ದೇವೆ. ವೇದಿಕೆಯ ಸದಸ್ಯರು ಹಾಗೂ ಸದಸ್ಯರಾಗದ ಮೂಲಗೇಣಿದಾರರು ಕಾನೂನು ಹೋರಾಟಕ್ಕೆ ಆರ್ಥಿಕ ಸಹಾಯ ಮಾಡಿ ಸಹಕರಿಸಬೇಕು. ಸದಸ್ಯರಾಗದವರು ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಪದಾಧಿಕಾರಿಗಳಾದ ಜೋಸೆಫ್ ಮಾರ್ಟಿಸ್, ಕ್ಯಾ.ಯು.ವಾಸ್, ಎಂ.ಎಸ್.ಅಲೋಶಿಯಸ್, ಎಂ.ಕೆ.ಯಶೋಧರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News