ಆ.15: ಬ್ಯಾರಿ ಜಾನಪದ ಕಲೆಗಳ ತರಬೇತಿ ಕೋರ್ಸ್ ಉದ್ಘಾಟನೆ
Update: 2021-08-12 20:28 IST
ಮಂಗಳೂರು, ಆ.12: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ತೋಡಾರಿನ ಆದರ್ಶ ಪದವಿ ಪೂರ್ವ ಕಾಲೇಜಿನ ಸಹಕಾರದಲ್ಲಿ ಆ.15ರಂದು ಬೆಳಗ್ಗೆ 9:30 ಬ್ಯಾರಿ ಜಾನಪದ ಕಲೆಗಳ ತರಬೇತಿ ಕೋರ್ಸ್ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ.
ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಮಾಡಲಿದ್ದು, ಕಾಲೇಜಿನ ಅಧ್ಯಕ್ಷ ಮುಹಮ್ಮದ್ ಆಸೀಫ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲೆ ಡಾ. ಶಾಂತಿ ವಿಜಯ್, ತೋಡಾರಿನ ಬದ್ರಿಯಾ ಸುನ್ನಿ ಜುಮಾ ಮಸೀದಿಯ ಅಧ್ಯಕ್ಷ ಡಿ.ಎ.ಉಸ್ಮಾನ್, ಡಾ.ಇ.ಕೆ.ಎ.ಸಿದ್ದೀಕ್ ಅಡ್ಡೂರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಯೋಧ ಝುಬೈರ್ ಹಳೆನೇರಂಕಿ ಮತ್ತು ಸಮಾಜ ಸೇವಕ ಝಾಕಿರ್ ಆರ್.ಎಸ್. ಸೂರಲ್ಪಾಡಿ ಅವರನ್ನು ಈ ಸಂದರ್ಭ ಸನ್ಮಾನಿಸಲಾಗುವುದು ಎಂದು ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ತಿಳಿಸಿದ್ದಾರೆ.