ಉಡುಪಿ: ಗಿಡ ನೆಟ್ಟು ಹಾಜಿ ಅಬ್ದುಲ್ಲಾ ಸಾಹೇಬರ ಸ್ಮರಣೆ
Update: 2021-08-12 22:17 IST
ಉಡುಪಿ, ಆ.12: ಹಾಜಿ ಅಬ್ದುಲ್ಲಾ ಸಾಹೇಬರ ಸ್ಮರಣಾರ್ಥ ಹಾಜಿ ಅಬ್ದುಲ್ಲಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಾರಾಡಿಯ ಅಣ್ಣಪ್ಪ ನಗರದಲ್ಲಿ ಐವತ್ತು ಸಸಿಗಳನ್ನು ನೆಡಲಾಯಿತು.
ಈ ಸಂದರ್ಭದಲ್ಲಿ ಟ್ರಸ್ಟ್‌ನ ವಿಶ್ವಸ್ಥರಾದ ಡಾ.ಪಿ.ವಿ.ಭಂಡಾರಿ, ಸಿರಾಜ್ ಅಹಮದ್, ಇಕ್ಬಾಲ್ ಮನ್ನಾ ಮತ್ತು ಯೋಗಿಶ್ ಶೇಟ್ ಉಪಸ್ಥಿತರಿದ್ದರು. ಅದೇ ರೀತಿ ಎ.ವಿ.ಬಾಳಿಗಾ ಚಾರೀಟಿಸ್‌ನ ಮುಖ್ಯ ಹಣಕಾಸು ಅಧಿಕಾರಿ ಕರುಣಾಕರ್ ಶೆಟ್ಟಿ ನೇತೃತ್ವದಲ್ಲಿ ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ಸಿಬ್ಬಂದಿ, ಹಿರಿಯ ನಾಗರಿಕರು ಜಯಶ್ರೀ, ರಾಜಾರಾಮ್ ಭಟ್, ಗೋಕುಲದಾಸ್ ಕಾಮತ್ ಮತ್ತು ವಾಮನ್ ಕುಂಜತ್ತೂರು ಗಿಡಗಳನ್ನು ನೆಟ್ಟರು.
ಹಿರಿಯ ಮಹಿಳಾ ಸಲಹೆಗಾರರಾದ ಪದ್ಮ ರಾಘವೇಂದ್ರ ನೇತೃತ್ವದಲ್ಲಿ ಆಸ್ಪತ್ರೆಯ ಮಹಿಳಾ ವಿಭಾಗದವರು ಗಿಡಗಳನ್ನು ನೆಟ್ಟರು. ದಿವ್ಯಶ್ರೀ ವೀಣಾ ನಿವೇದಿತಾ ರಾಯನಿ ಹಾಜರಿದ್ದರು. ಹಾಜಿ ಅಬ್ದುಲ್ಲಾ ಸಾಹೇಬರ ಸ್ಮರಣಾರ್ಥ ಟ್ರಸ್ಟ್‌ನಿಂದ ಬ್ರಹ್ಮಗಿರಿಯ ಆರಾಧನಾ ಹಿರಿಯ ನಾಗರಿಕರ ಮನೆಯಲ್ಲಿ ಆಹಾರ ವನ್ನು ವಿತರಿಸಲಾಯಿತು.