ಕುಂದಾಪುರ: ಹೊಟೇಲ್ ಉದ್ಯಮಿ ಆತ್ಮಹತ್ಯೆ
Update: 2021-08-12 22:40 IST
ಕುಂದಾಪುರ, ಆ.12: ಕೋವಿಡ್‌ನಿಂದ ಮಾಡಿರುವ ಸಾಲ ತೀರಿಸಲಾಗದ ಚಿಂತೆಯಲ್ಲಿ ಮನನೊಂದ ಕಾಳಾವರದ ಶಾಲೆಯ ಬಳಿ ನಂದಿಕೇಶ್ವರ ಹೋಟೆಲ್ ಮಾಲಕ ರಾಘವೇಂದ್ರ ಗಾಣಿಗ(42) ಎಂಬವರು ಆ.11ರಂದು ರಾತ್ರಿ ವೇಳೆ ಮನೆ ಸಮೀಪದ ಹಾಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.