ದ.ಕ.ಜಿಪಂ ಸರಕಾರಿ ಪ್ರೌಢಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ಎಸ್.ಎಂ.ಉಸ್ಮಾನ್ ಆಯ್ಕೆ
Update: 2021-08-12 22:50 IST
ಮಂಗಳೂರು,ಆ.12: ಬಜ್ಪೆ ಸಮೀಪದ ಆದ್ಯಪಾಡಿಯ ದ.ಕ.ಜಿಪಂ ಸರಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸಭೆಯು ಇತ್ತೀಚೆಗೆ ನಡೆಯಿತು.
ಸಭೆಯಲ್ಲಿ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರಾಗಿ ಎಸ್.ಎಂ. ಉಸ್ಮಾನ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಸದಸ್ಯರಾಗಿ ಮೋಹಿನಿ, ನಾಗೇಶ್, ಭಾರತಿ, ಪಾರ್ವತಿ ಶಿವಪ್ಪ ತಳವಾರ, ಪುಷ್ಪಾ, ಪೂರ್ಣಿಮಾ, ಸುಮಿತ್ರಾ, ಶೈನಾಝ್ ಆಯ್ಕೆಯಾಗಿದ್ದಾರೆ. ಮುಖ್ಯಶಿಕ್ಷಕಿ ಮೀರಾ ಎಸ್. ಸ್ವಾಗತಿಸಿದರು.