ಜಾತಿ ಗಣತಿ ವಿಚಾರದಲ್ಲಿ ನಿತೀಶ್ ಕುಮಾರ್ ರನ್ನು ಪ್ರಧಾನಿ ಮೋದಿ ಅವಮಾನಿಸಿದ್ದಾರೆ: ತೇಜಸ್ವಿ ಯಾದವ್

Update: 2021-08-13 09:45 GMT

ಪಾಟ್ನಾ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಜಾತಿ ಆಧಾರಿತ ಜನಗಣತಿಯ ಅಗತ್ಯದ ಕುರಿತಾಗಿ ಚರ್ಚಿಸಲು ಕೋರಿದ ಸಮಯವನ್ನು ನೀಡದೆ ಅವಮಾನಿಸಿದ್ದಾರೆ ಎಂದು ಬಿಹಾರ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರು ಶುಕ್ರವಾರ  ಹೇಳಿದ್ದಾರೆ ಎಂದು NDTV ವರದಿ ಮಾಡಿದೆ.

ಈ ವಿಚಾರದ ಕುರಿತು ಕೇಂದ್ರ ಸರಕಾರಕ್ಕೆ ನಾನೂ ಕೂಡ  ಪತ್ರವನ್ನು ಬರೆದಿದ್ದೇನೆ ಎಂದು ರಾಷ್ಟ್ರೀಯ ಜನತಾದಳ (ಆರ್‌ಜೆಡಿ) ನಾಯಕ ಹೇಳಿದರು.

ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಲು ಕೋರಿ ಆಗಸ್ಟ್ 4 ರಂದು ಪ್ರಧಾನ ಮಂತ್ರಿಗಳ ಕಚೇರಿಗೆ ಕಳುಹಿಸಿದ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸ್ವತಃ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೇ ಹೇಳಿದ ಕೆಲವು ದಿನಗಳ ನಂತರ ಯಾದವ್ ಅವರ ಪ್ರತಿಕ್ರಿಯೆ ಬಂದಿದೆ.

"(ಕೇಂದ್ರ ಮತ್ತು ಬಿಹಾರ) ಎರಡೂ ಕಡೆ ಎನ್ ಡಿಎ ನೇತೃತ್ವದ ಸರಕಾರಗಳಿರುವುದರಿಂದ ...  ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ನಾವು ಯಾವುದೇ ಪಕ್ಷಪಾತವಿಲ್ಲದೆ, ಗೌರವಾನ್ವಿತ ಮುಖ್ಯ ಮಂತ್ರಿಯವರನ್ನು ಅವರ ಕೊಠಡಿಯಲ್ಲಿ ಭೇಟಿ ಮಾಡಿದ್ದೆವು. ನೀವು ಪ್ರಧಾನಿಯ ಜೊತೆ ಚರ್ಚಿಸಲು ಸ್ವಲ್ಪ ಸಮಯ ಬಯಸುತ್ತಿದ್ದೀರಿ.   ನಾವು ಅವರನ್ನು ಭೇಟಿ ಮಾಡುತ್ತೇವೆ ಎಂದು ಹೇಳಿದ್ದೆವು

"ಒಂದು ವಾರದಿಂದ ಅವರಿಗೆ ಸಮಯ ನೀಡದಿದ್ದರೆ ಅದು ಮುಖ್ಯಮಂತ್ರಿಗೆ ಮಾಡುವ ಅವಮಾನವಲ್ಲವೇ. ಪ್ರಧಾನಿ ಇತರ ಗಣ್ಯರನ್ನು ಭೇಟಿ ಮಾಡುತ್ತಿದ್ದಾರೆ. ಕುಮಾರ್ ಅವರನ್ನು ಈ ವಿಚಾರದಲ್ಲಿ ಪ್ರತ್ಯೇಕಿಸಲಾಗಿದೆ’’ ಎಂದು ಯಾದವ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News