×
Ad

ಬಾಲಕ ತನ್ನ ಮನೆಯೆದುರು ಮೂತ್ರವಿಸರ್ಜನೆ ಮಾಡಿದನೆಂದು ಆತನ ತಾಯಿಯನ್ನು ಕೊಂದ 17 ವರ್ಷದ ಯುವಕ

Update: 2021-08-13 14:53 IST

ಹೊಸದಿಲ್ಲಿ: ನಾಲ್ಕು ವರ್ಷದ ಬಾಲಕನೊಬ್ಬ ತನ್ನ ಮನೆಯೆದುರು ಮೂತ್ರ ವಿಸರ್ಜನೆ ಮಾಡಿದ್ದನ್ನು ನೋಡಿ ಸಿಟ್ಟುಗೊಂಡ 17 ವರ್ಷದ ಯುವಕನೊಬ್ಬ ಆ ಮಗುವಿನ ತಾಯಿಯನ್ನು ಹತ್ಯೆಗೈದ ಘಟನೆ ರಾಜಧಾನಿಯ ರೋಹಿಣಿ ಪ್ರದೇಶದಿಂದ ಬುಧವಾರ ವರದಿಯಾಗಿದೆ.

ಕೊಲೆಗೀಡಾದ ಮಹಿಳೆಯನ್ನು ಸವಿತಾ ರಾಣಾ ಆಲಿಯಾಸ್ ಪ್ರಿಯಾ (33) ಅಂದು ಗುರುತಿಸಲಾಗಿದೆ. ಅಪ್ರಾಪ್ತ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಹಾಗೂ ಕೊಲೆಗೀಡಾದ ಮಹಿಳೆಯ ನಡುವೆ ಕ್ಷುಲ್ಲಕ ಕಾರಣ ಮುಂದಿಟ್ಟು ಜಗಳ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆಯ ಮಗ ಆರೋಪಿಯ ಮನೆಯೆದುರು ಮಲವಿಸರ್ಜನೆ ಮಾಡಿದ್ದನೆಂದು ಕೆಲ ಇತರ ವರದಿಗಳು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News