×
Ad

ಭಾರತದ ಟ್ವಿಟರ್‌ ಮುಖ್ಯಸ್ಥ ಮನೀಶ್‌ ಮಹೇಶ್ವರಿಯವರನ್ನು ವಿದೇಶಕ್ಕೆ ವರ್ಗಾವಣೆ ಮಾಡಿದ ಸಂಸ್ಥೆ

Update: 2021-08-13 19:01 IST
Photo: Indiatoday

ಹೊಸದಿಲ್ಲಿ: ಕೇಂದ್ರ ಸರಕಾರ ಹಾಗೂ ಟ್ವಿಟರ್‌ ನಡುವೆ ಅಸಮಾಧಾನ ಮುಂದುವರಿಯುತ್ತಿರುವ ಮಧ್ಯೆಯೇ ಟ್ವಿಟರ್‌ ಸಂಸ್ಥೆಯು ಟ್ವಿಟರ್‌ ಇಂಡಿಯಾ ಮುಖ್ಯಸ್ಥ ಮನೀಶ್‌ ಮಹೇಶ್ವರಿಯವರನ್ನು ವರ್ಗಾವಣೆ ಮಾಡಿದೆ ಎಂದು ತಿಳಿದು ಬಂದಿದೆ. ಅವರನ್ನು ಅಮೆರಿಕಾದಲ್ಲಿ ಹೊಸ ಹುದ್ದೆಗೆ ನಿಯೋಜಿಸಲಾಗಿದೆ.

ವರದಿಗಳ ಪ್ರಕಾರ, ಟ್ವಿಟರ್ ಇಂಡಿಯಾ ಈಗ ಪ್ರಮುಖ ಕಾರ್ಯನಿರ್ವಾಹಕರೊಂದಿಗೆ 'ನಾಯಕತ್ವ ಮಂಡಳಿಯನ್ನು' ನೇಮಿಸುತ್ತದೆ, ಹಾಗೂ ಅವರು ನೇರವಾಗಿ ಟ್ವಿಟರ್‌ನ ವಿದೇಶ ಕಾರ್ಯ ನಿರ್ವಾಹಕರಿಗೆ ವರದಿ ಮಾಡುತ್ತಾರೆ ಎನ್ನಲಾಗಿದೆ.

ಮನೀಶ್ ಮಹೇಶ್ವರಿ ಕಂಪನಿಯನ್ನು ತೊರೆಯುವುದಿಲ್ಲ ಆದರೆ ಯುಎಸ್‌ಗೆ ತೆರಳಲಿದ್ದಾರೆ ಎಂದು ಟ್ವಿಟರ್ ಖಚಿತಪಡಿಸಿದೆ. ಹೊಸ ಮಾರುಕಟ್ಟೆ ಪ್ರವೇಶದ ಮೇಲೆ ಕೇಂದ್ರೀಕರಿಸಿದ ಕಾರ್ಯತಂತ್ರ ಮತ್ತು ಕಾರ್ಯಾಚರಣೆಗಳ ಹಿರಿಯ ನಿರ್ದೇಶಕರಾಗಿ ಅವರನ್ನು ನೇಮಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News