ಎಸೆಸೆಲ್ಸಿ ಫಲಿತಾಂಶ : ಸೈಂಟ್ ಸಿಸಿಲೀಸ್ ಫ್ರೌಡಶಾಲೆಯ 40 ಮಂದಿ ಎ+ ತೇರ್ಗಡೆ
Update: 2021-08-13 20:19 IST
ಉಡುಪಿ, ಆ.13: ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ಸಂತ ಸಿಸಿಲೀಸ್ ಪ್ರೌಢಶಾಲೆಯ 184 ಮಂದಿ ಪರೀಕ್ಷೆ ಬರೆದಿದ್ದು, ಎಲ್ಲರೂ ತೇರ್ಗಡೆ ಗೊಂಡಿದ್ದಾರೆ. ಇವರಲ್ಲಿ 40 ಮಂದಿ ಎ+, 35 ಮಂದಿ ಎ, 67 ಮಂದಿ ಬಿ ಹಾಗೂ 42 ಮಂದಿ ಸಿ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಶಾಲೆಯ ಧರ್ತಿ ಅವರು ಗರಿಷ್ಠ 625ರಲ್ಲಿ 620 (ಶೇ.99.20)ಅಂಕಗಳನ್ನು ಪಡೆದು ಶಾಲೆಯಲ್ಲಿ ಪ್ರಥಮರಾದರೆ, ತನ್ವಿ ಡಿ.ಆಚಾರ್ಯ ಅವರು 614 (ಶೇ.98.24)ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾಗಿದ್ದಾರೆ. ಶಾಲೆಯ ಒಟ್ಟು ಆರು ಮಂದಿ ವಿದ್ಯಾರ್ಥಿಗಳು 604 (ಶೇ.96.64) ಅಂಕ ಗಳಿಸಿದ್ದಾರೆ ಎಂದು ಶಾಲೆಯ ಮುಖ್ಯೋಪಾಧ್ಯಾಯಿನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.