×
Ad

ಶಾಸಕ ಖಾದರ್‌ರ ಹೇಳಿಕೆಗೆ ಬಿಜೆಪಿ ಖಂಡನೆ

Update: 2021-08-14 13:18 IST

ಮಂಗಳೂರು, ಆ.14: ಎನ್‌ಐಎ ತನಿಖೆಯ ಕುರಿತು ಮಾಜಿ ಸಚಿವ ಯು.ಟಿ.ಖಾದರ್ ಅವರೇ ಗೊಂದಲಮಯ ಹೇಳಿಕೆ ನೀಡಿದ್ದಾರೆ. ಅದನ್ನು ಪಕ್ಷ ಖಂಡಿಸುತ್ತದೆ ಎಂದು ದ.ಕ. ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ್ ಮೂಡುಬಿದಿರೆ ತಿಳಿಸಿದ್ದಾರೆ,

ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಉಳ್ಳಾಲದ ಮನೆಯೊಂದರಲ್ಲಿ ನಡೆದ ಲವ್ ಜಿಹಾದ್ ಮತ್ತು ಉಗ್ರರ ಜೊತೆಗಿನ ಸಂಬಂಧದ ವಿಚಾರವನ್ನು ಖಂಡಿಸಿ ವಿಎಚ್‌ಪಿ ಪ್ರತಿಭಟನೆ ನಡೆಸಿರುವುದು ಶ್ಲಾಘನೀಯ. ಆ ಮನೆಯಲ್ಲಿ ನಡೆದ ಮತಾಂತರದ ವಿಚಾರವನ್ನು ಕೇಳಲು ನೀವು ಯಾರು ಅಂತ ಶಾಸಕ ಖಾದರ್ ನಮ್ಮನ್ನು ಪ್ರಶ್ನಿಸಿದ್ದಾರೆ. ದೇಶದ ಯಾವುದೇ ಭಾಗದಲ್ಲಿ ಲವ್‌ ಜಿಹಾದ್, ಮತಾಂತರ, ಉಗ್ರ ಕೃತ್ಯ ನಡೆದರೂ ಕೂಡ ನಾವು ಪ್ರಶ್ನೆ ಮಾಡುತ್ತೇವೆ. ಅದನ್ನ ಕೇಳೋಕೆ ನೀವು ಯಾರು ಅಂತ ಯು.ಟಿ. ಖಾದರ್‌ರನ್ನು ನಾವು ಪ್ರಶ್ನಿಸುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News