ರಕ್ಷಣಾ ಪಡೆಗಳನ್ನು ಮರು ಸಂಘಟಿಸುವುದು ನಮ್ಮ ಆದ್ಯತೆ: ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ

Update: 2021-08-14 09:45 GMT

ಕಾಬೂಲ್: "ದೇಶದಲ್ಲಿ ಅಸ್ಥಿರತೆಯನ್ನು ತಡೆಗಟ್ಟಲು ಸಮಾಲೋಚನೆಗಳನ್ನು ನಡೆಸಲಾಗುತ್ತಿದೆ. ಪ್ರಸ್ತುತ ಪರಿಸ್ಥಿತಿಯಲ್ಲಿ, ನಮ್ಮ ಭದ್ರತೆ ಹಾಗೂ  ರಕ್ಷಣಾ ಪಡೆಗಳನ್ನು ಮತ್ತೊಮ್ಮೆ ಸಂಘಟಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ ಹಾಗೂ ಈ ನಿಟ್ಟಿನಲ್ಲಿ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ" ಎಂದು ಶನಿವಾರ ದೂರದರ್ಶನದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಹೇಳಿದ್ದಾರೆ.

"ನಿಮ್ಮ ಅಧ್ಯಕ್ಷನಾಗಿ ನಾನು ಮತ್ತಷ್ಟು ಅಸ್ಥಿರತೆ, ಹಿಂಸೆ ಹಾಗೂ ಜನರ ಸ್ಥಳಾಂತರವನ್ನು ತಡೆಯುವತ್ತ ಗಮನ ನೀಡುವೆ. ಮತ್ತಷ್ಟು ಹತ್ಯೆಗಳು, ಸಾರ್ವಜನಿಕ ಆಸ್ತಿ ನಾಶಕ್ಕೆ ಕಾರಣವಾಗುವ ಯುದ್ಧವನ್ನು ಅಫ್ಘಾನಿಸ್ತಾನದ ಜನರ ಮೇಲೆ ಹೇರುವುದಿಲ್ಲ'' ಎಂದು ಘನಿ ಹೇಳಿದ್ದಾರೆ.

ಘನಿ ಅವರು ರಾಜೀನಾಮೆ ನೀಡುವ ಅಥವಾ ಸನ್ನಿವೇಶದ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಯಾವುದೇ ಸುಳಿವನ್ನು ನೀಡಲಿಲ್ಲ, ಆದರೆ ಯುದ್ಧವನ್ನು ಕೊನೆಗೊಳಿಸುವ ಪ್ರಯತ್ನದ ಭಾಗವಾಗಿ "ಸಮಾಲೋಚನೆಗಳು" ನಡೆಯುತ್ತಿವೆ ಎಂದು ಹೇಳಿದರು.

ತಾಲಿಬಾನ್ ಈವರೆಗೆ ಅಫ್ಘಾನಿಸ್ತಾನದಾದ್ಯಂತ 18 ಪ್ರಾಂತೀಯ ರಾಜಧಾನಿಗಳ ಮೇಲೆ ಹಿಡಿತ ಸಾಧಿಸಿದೆ. ತಾಲಿಬಾನ್ ಹಾಗೂ ಪಾಕಿಸ್ತಾನ ಘನಿ ರಾಜೀನಾಮೆಗೆ ಒತ್ತಾಯಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News