ಮಂಗಳೂರು: ಸೈಬರ್ ಕ್ರೈಂ ಎಎಸ್‌ಐ ಮೋಹನ್ ಗೆ ರಾಷ್ಟ್ರಪತಿ ಪದಕ
Update: 2021-08-14 20:52 IST
ಮಂಗಳೂರು, ಆ.14: ನಗರ ಸೈಬರ್ ಅಪರಾಧ ಪೊಲೀಸ್ ಠಾಣೆಯ ಎಎಸ್‌ಐ ಮೋಹನ್ ಅವರ ಸೇವೆಗೆ ರಾಷ್ಟ್ರಪತಿ ಪದಕ ಲಭಿಸಿದೆ.
ಮಂಗಳೂರು ಕುಂಜತ್ತಬೈಲ್ ನಿವಾಸಿಯಾಗಿರುವ ಮೋಹನ್ ಅವರು 20 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.